ಮೈಸೂರು: ಐಎಂಎಫ್ನ ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್ ಮೈಸೂರಿನ ತಮ್ಮ ತಂದೆಯ ಮನೆಗೆ ಆಗಮಿಸಿದ್ದು, ಅವರನ್ನು ರೈತ ಮುಖಂಡ ಕುರುಬೂರು ಶಾಂತಕುಮಾರ್ ಭೇಟಿ ಮಾಡಿದರು.
ಮೈಸೂರು ಮೂಲದವರಾದ ಐಎಂಎಫ್ ಮುಖ್ಯ ಆರ್ಥಿಕ ಸಲಹೆಗಾರರಾದ ಗೀತಾ ಗೋಪಿನಾಥ್ ಅವರನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಭೇಟಿ ಮಾಡಿ, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕೊರೊನಾ ಸಮಸ್ಯೆಗೆ ಪರಿಹಾರ ಕ್ರಮಗಳೇನು ಹಾಗೂ ರೈತರ ಕೃಷಿ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಗೀತಾ ಗೋಪಿನಾಥ್ ಸೇವಾ ಕ್ಷೇತ್ರಕ್ಕೆ, ಪ್ರವಾಸೋದ್ಯಮಕ್ಕೆ ಹಾಗೂ ಕೃಷಿ ಕ್ಷೇತ್ರಕ್ಕೆ ಕೊರೊನಾ ಸಮಸ್ಯೆ ಉಂಟುಮಾಡಿದ್ದು, ಈಗ ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಬೇಕೆಂದು ಜಿ-20 ರಾಷ್ಟ್ರಗಳ ಸಭೆಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ರೈತ ಮುಖಂಡರ ಜೊತೆ ಚರ್ಚೆ ಮಾಡಿದರು ಎಂದು ಕುರುಬುರು ಶಾಂತಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೀತಾ ಗೋಪಿನಾಥ್ ತಂದೆ ರೈತ ಮುಖಂಡರಾದ ಟಿ.ವಿ.ಗೋಪಿನಾಥ್ ಉಪಸ್ಥಿತರಿದ್ದರು.
ಇದನ್ನೂ ಓದಿ: ರಿವರ್ಸ್ ತೆಗೆಯುವಾಗ ಬೊಲೇರೋ ಹತ್ತಿ ಮಗು ದಾರುಣ ಸಾವು