ETV Bharat / state

ಹವಾಮಾನ ವೈಪರೀತ್ಯಕ್ಕೆ ಉತ್ತರ ದೊರೆಯುವುದು ಕೃಷಿಯಿಂದ: ರಾಜವಂಶಸ್ಥ ಯದುವೀರ್ - ಈಟಿವಿ ಭಾರತ ಕನ್ನಡ

ಇದೇ ತಿಂಗಳಂದು ಮೈಸೂರಿನಲ್ಲಿ ನಡೆಯಲಿರುವ ಐದನೇ ಕಿಸಾನ್​ ಸ್ವರಾಜ್​ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ರನ್ನು ಮಾಡಲಾಗಿದೆ.

KN_MYS_
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
author img

By

Published : Nov 9, 2022, 6:00 PM IST

ಮೈಸೂರು: ಇತ್ತೀಚೆಗೆ ಜಗತ್ತಿನಲ್ಲಿ ವಾತಾವರಣ ವೈಪರೀತ್ಯ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಉತ್ತರ ದೊರೆಯುವುದು ಕೃಷಿಯಿಂದ ಮಾತ್ರ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇಂದು ನಗರದಲ್ಲಿ ಐದನೇ ಕಿಸಾನ್​ ಸ್ವರಾಜ್​ ಸಮ್ಮೇಳನ ಕುರಿತು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾತಾವರಣ ವೈಪರೀತ್ಯ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಈ ಸಂಬಂಧ ಈಜಿಪ್ಟ್​ನಲ್ಲಿ ಇತ್ತೀಚೆಗೆ ವಾತಾವರಣ ವೈಪರೀತ್ಯದ ಬಗ್ಗೆ ಸಮ್ಮೇಳನ ನಡೆಯಿತು. ಮುಖ್ಯವಾಗಿ ವಾತಾವರಣ ವೈಪರೀತ್ಯದ ಸಮಸ್ಯೆಗೆ ಉತ್ತರ ದೊರೆಯುವುದು ನಮ್ಮ ಕೃಷಿ ಕ್ಷೇತ್ರದಲ್ಲಿ. ಹಾಗಾಗಿ ಮೈಸೂರಿನಲ್ಲಿ ನಡೆಯಲಿರುವ ಸ್ವರಾಜ್​ ಸಮ್ಮೇಳನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕೃಷಿಯ ಬಗ್ಗೆ ತಿಳಿದುಕೊಳ್ಳಬಹುದು ಎಂದರು.

ಸ್ವರಾಜ್ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಸುಮಾರು 2000 ಪ್ರತಿನಿಧಿಗಳು ದೇಶದ ಬೇರೆ ಬೇರೆ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಇಂತಹ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷನಾಗಿರುವುದು ಸಂತೋಷ ತಂದಿದೆ. ಮೊದಲಿನಿಂದಲೂ ಮೈಸೂರು ಸಂಸ್ಥಾನ ಕೃಷಿ ಮತ್ತು ರೈತರಿಗೆ ಹೆಚ್ಜಿನ ಪ್ರೋತ್ಸಾಹ ಮತ್ತು ರೈತರ ಹಿತರಕ್ಷಣೆ ಮಾಡುತ್ತ ಬಂದಿದೆ. ಆ ಕಾರ್ಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಇನ್ನು, ಇದೇ ತಿಂಗಳ 11, 12 ಮತ್ತು 13 ರಂದು ಐದನೇ ಕಿಸಾನ್ ಸ್ವರಾಜ್ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನ ಕುರಿತು ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಸಮ್ಮೇಳನವು ಸುಸ್ಥಿರ ಮತ್ತು ಸಮಗ್ರ ಕೃಷಿಯ ಮೈತ್ರಿಕೂಟ ಅಯೋಜಿಸಿದ್ದು, ದೇಶದ 23 ರಾಜ್ಯಗಳಿಂದ 2000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪರಿಸರ ಆಧಾರಿತ ಕೃಷಿಯ ಕಡೆ ರೈತರನ್ನು ತೊಡಗಿಸಿಕೊಳ್ಳುವುದು ಈ ಬಗ್ಗೆ ಮಾಹಿತಿಯನ್ನು ನೀಡಲು ಈ ಕೃಷಿ ಸ್ವರಾಜ್ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಇದರಲ್ಲಿ ಕೃಷಿಯ ವೈವಿಧ್ಯಮಯ ಪ್ರದರ್ಶನ, ಹೊಸ ತಳಿ ಬೀಜ ಮೇಳ ಮುಂತಾದ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ಮೂರು ದಿನದ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಇರಲಿವೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಅವಳಿ ಜಿಲ್ಲೆಗಳಲ್ಲಿ ಉಲ್ಬಣಗೊಳ್ಳುತ್ತಿರುವ ಚರ್ಮಗಂಟು ರೋಗ : ಪಶುವೈದ್ಯರನ್ನು ನೇಮಿಸಲು ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.