ಮೈಸೂರು: ಗೊಂದಲವನ್ನು ಬಗೆಹರಿಸಿ ಆದಷ್ಟು ಬೇಗ ನಿವಾರಣೆ ಮಾಡಿ, ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನದ ಕಾಮಗಾರಿ ಆರಂಭಿಸಲಾಗುವುದು. ಪಿಪಿ ಇಲಾಖೆ ಅಥವಾ ಸರ್ಕಾರ ಮಾಡಬೇಕೋ ಎಂಬುದನ್ನು ಆದಷ್ಟು ಬೇಗ ನಿರ್ಧರಿಸಿ ಗೊಂದಲ ನಿವಾರಣೆ ಮಾಡಲಾಗುವುದು. ಈ ವರ್ಷವೇ ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ ಇಂದು ಬಾಗಿನ ಅರ್ಪಿಸಿದರು. ಹೆಚ್.ಡಿ. ಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ತಾಲೂಕು ಹಿಂದುಳಿದ ತಾಲೂಕು ಎಂದು ನಾಮಾಂಕಿತ ನಂಜುಂಡಪ್ಪ ವರದಿಯಲ್ಲೂ ಕಂಡಿದೆ. ಆದ್ದರಿಂದ ತಾಲೂಕಿನ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ತರಲಾಗುವುದು. ಶಿಕ್ಷಣ ವಲಯದಲ್ಲಿ ಪ್ರಗತಿ ಸಾಧಿಸಲು ಹೆಚ್ಚು ಗಮನ ನೀಡಲಾಗುವುದು ಎಂದು ಸಿಎಂ ಹೇಳಿದರು.
ಶಾಸಕರಿಗೆ ಮಳೆಹಾನಿ ಸಂಬಂಧ ಅನುದಾನ ಮೊದಲೇ ನೀಡಲಾಗಿದೆ. ರಸ್ತೆಗಳು, ಮಳೆ ಹಾನಿ, ಮನೆಗಳು, ಆಸ್ತಿಪಾಸ್ತಿ ನಷ್ಟ ಮುಂತಾದವುಗಳಿಗೆ ಶೀಘ್ರ ಹಣ ನೀಡುವಂತೆಯು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ