ETV Bharat / state

ಜಂಬೂಸವಾರಿ ವೀಕ್ಷಣೆಗೆ ಹರಿದು ಬರುತ್ತಿರುವ ಜನಸಾಗರ.. - ಮೈಸೂರು ದಸರಾ-2019

ಅರಮನೆ ಒಳಗಿನಿಂದ ಸಂಜೆ 4 ಗಂಟೆಯಿಂದ ಅಂಬಾರಿ ಹೊರಡಲಿದೆ. ಇದರ ವೀಕ್ಷಣೆಗೆ ತೆರಳಲು ಜನ ಪ್ರಯತ್ನಿಸುತ್ತಿದ್ದು, ಪೊಲೀಸರು ಇವರನ್ನು ಸಾಲಿನಲ್ಲಿ ಬಿಡುತ್ತಿದ್ದಾರೆ. ಒಳಪ್ರವೇಶಿಸಲು ಜನ ಹರಸಾಹಸ ನಡೆಸಿದ್ದಾರೆ.

ಜಂಬೂಸವಾರಿವೀಕ್ಷಣೆಗೆ ಹರಿದು ಬರುತ್ತಿರುವ ಜನಸಾಗರ
author img

By

Published : Oct 8, 2019, 3:51 PM IST

ಮೈಸೂರು: ಅರಮನೆ ಒಳಗಿನಿಂದ ಸಂಜೆ 4ಗಂಟೆಯಿಂದ ಅಂಬಾರಿ ಹೊತ್ತ ಆನೆ ಮೆರವಣಿಗೆ ಹೊರಡಲಿದೆ. ಈ ಜಂಬೂ ಸವಾರಿಯ ವೀಕ್ಷಣೆಗೆ ಈಗಾಗಲೇ ಸಾವಿರಾರು ಜನ ತೆರಳುತ್ತಿದಾರೆ. ಪೊಲೀಸರು ಪ್ರೇಕ್ಷಕರನ್ನ ಸರತಿಯಲ್ಲಿ ಬಿಡುತ್ತಿದ್ದಾರೆ. ಒಳಪ್ರವೇಶಿಸಲು ಜನ ಹರಸಾಹಸ ನಡೆಸಿದ್ದಾರೆ.

ಜಂಬೂಸವಾರಿ ವೀಕ್ಷಣೆಗೆ ಹರಿದು ಬರುತ್ತಿರುವ ಜನಸಾಗರ

ದಸರಾ ವಿಜಯ ದಶಮಿ ಸಂದರ್ಭದಲ್ಲಿ ಅರಮನೆ ಒಳಭಾಗ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಅರಮನೆ ಬಹುತೇಕ ಜನರಿಂದಲೇ ತುಂಬಿದೆ.

ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುವ ಪ್ರವೇಶದ್ವಾರಗಳು ಕೆಲವಿದ್ದರೆ, ಇನ್ನೂ ಕೆಲ ಪ್ರವೇಶದ್ವಾರಗಳು ಸಾರ್ವಜನಿಕರ ಪ್ರವೇಶಕ್ಕೆ ಮಾತ್ರ ಮುಕ್ತವಾಗಿವೆ. ಸಾರ್ವಜನಿಕ ಪ್ರವೇಶಕ್ಕೆ ಮುಕ್ತರಾಗಿರುವ ಮಾರ್ಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿದ್ದು ಒಳಹೋಗಲು ಶತ ಪ್ರಯತ್ನ ನಡೆಸಿದ್ದಾರೆ. ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Intro:newsBody:ಅರಮನೆ ಕಾರ್ಯಕ್ರಮ ವೀಕ್ಷಣೆಗೆ ಜಮಾಯಿಸುತ್ತಿದ್ದಾರೆ ಸಾವಿರಾರು ಅಭಿಮಾನಿಗಳು

ಮೈಸೂರು: ದಸರಾ ವಿಜಯದಶಮಿ ಸಂದರ್ಭದಲ್ಲಿ ಅರಮನೆ ಒಳಭಾಗ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಅರಮನೆ ಪ್ರವೇಶದ ಬಹುತೇಕ ಜನರಿಂದಲೇ ತುಂಬಿಹೋಗಿದ್ದು, ಒಳಪ್ರವೇಶಿಸಲು ಜನ ಹರಸಾಹಸ ನಡೆಸಿದ್ದಾರೆ.
ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುವ ಪ್ರವೇಶದ್ವಾರಗಳು ಕೆಲವಿದ್ದರೆ, ಇನ್ನೂ ಕೆಲ ಪ್ರವೇಶದ್ವಾರಗಳು ಸಾರ್ವಜನಿಕರ ಪ್ರವೇಶಕ್ಕೆ ಮಾತ್ರ ಮುಕ್ತವಾಗಿವೆ. ಸಾರ್ವಜನಿಕ ಪ್ರವೇಶಕ್ಕೆ ಮುಕ್ತರಾಗಿರುವ ಮಾರ್ಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿದ್ದು ಒಳಹೋಗಲು ಶತ ಪ್ರಯತ್ನ ನಡೆಸಿದ್ದಾರೆ.
ಅರಮನೆ ಒಳಗೆ ಸಂಜೆ 4 ಗಂಟೆಯಿಂದ ಅಂಬಾರಿ ತೆರಳುವ ಕಾರ್ಯಗಳು ಆರಂಭವಾಗಲಿದ್ದು ಇದರ ವೀಕ್ಷಣೆಗೆ ತೆರಳಲು ಜನ ಪ್ರಯತ್ನಿಸುತ್ತಿದ್ದು, ಪೊಲೀಸರು ಇವರನ್ನು ಸರತಿ ಸಾಲಲ್ಲಿ ಬಿಡುತ್ತಿದ್ದಾರೆ.
ವಿಪರೀತ ಬಿಸಿಲು ಮೈಸೂರಿನಲ್ಲಿ ಕಾಡುತ್ತಿದ್ದು ಜನ ಇದನ್ನು ಲೆಕ್ಕಿಸದೆ ಮಧ್ಯಾಹ್ನದ ಬಿಸಿಲಿನಲ್ಲಿ ಸರದಿ ಸಾಲಲ್ಲಿ ನಿಂತು ಅರಮನೆ ಪ್ರವೇಶಕ್ಕೆ ಸಮಯ ಕಾಯುತ್ತಿದ್ದಾರೆ. ಅರಮನೆ ಒಳಗೆ ಅಂಬಾರಿ ತೆರಳುವ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಸಂಜೆ 4ರ ನಂತರ ಆರಂಭವಾಗಲಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಇದಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗೆ ಅರಮನೆ ರಾಜವಂಶಸ್ಥರ ಪೂಜಾ ವಿಧಿವಿಧಾನಗಳು ನೆರವೇರಿದ್ದು ಇದೀಗ ಸರ್ಕಾರಿ ಕಾರ್ಯಕ್ರಮಗಳು ಚಾಲನೆ ಪಡೆಯುವ ಸಮಯ ಕೂಡಿ ಬರುತ್ತಿದೆ. ಸರ್ಕಾರಿ ಕಾರ್ಯಕ್ರಮಗಳು ಇನ್ನೇನು ಆರಂಭವಾಗಬೇಕಿದ್ದ ಅಷ್ಟರೊಳಗೆ ತಲುಪುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಸದ್ಯ ಅರಮನೆಯ ಒಳಗೆ ಹಾಗೂ ಹೊರಗೆ ಅಪಾರ ಸಂಖ್ಯೆಯಲ್ಲಿ ಜನ ಸೇರ್ಪಡೆಯಾಗುತ್ತಿದ್ದು ಇವರನ್ನು ನಿಭಾಯಿಸುವುದೇ ಪೋಲಿಸರಿಗೆ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ.
ಒಂದು ಹಂತದಲ್ಲಿ ಸಂಚಾರದಟ್ಟಣೆ ತೀವ್ರಗೊಂಡಾಗ ಇದನ್ನು ತಿಳಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳುವ ಜೊತೆಗೆ ಪೋಲಿಸರಿಗೂ ಕೆಲ ಸೂಚನೆ ನೀಡಿ ತೆರಳಿದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.