ಮೈಸೂರು: ಇವತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ, ರಾಜಕೀಯ ಮಾತನಾಡುವುದಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ "ಕಾಡಿನೊಳಗೊಂದು ಜೀವ" ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದ ತೇಜಸ್ವಿನಿ ಅನಂತಕುಮಾರ್, ಕಾಡಿನೊಳಗೊಂದು ಜೀವ ಪುಸ್ತಕ ಬರೀ ಕಾಗದದೊಳಗಿನ ಗುಚ್ಚ ಅಲ್ಲ. ಕಾಡು, ನೀರಿನ ಸಮಸ್ಯೆ, ಪರಿಸರ ಹಾಗೂ ಕಾಡು ಪ್ರಾಣಿಗಳು, ಕಾಡಿನ ಜನರ ಜೀವನ ಇವೆಲ್ಲವೂ ಈ ಪುಸ್ತಕದಲ್ಲಿದೆ. ಇದನ್ನು ಚಿಣ್ಣಪ್ಪ ತಮ್ಮ ಅನುಭವದಲ್ಲಿ ಬರೆಸಿದ್ದಾರೆ ಎಂದರು.
ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇವತ್ತು ಪುಸ್ತಕ ಬಿಡುಗಡೆ ಮಾಡುವುದಕ್ಕೆ ಮಾತ್ರ ಬಂದಿದ್ದೇನೆ, ರಾಜಕೀಯ ಮಾತಾಡುವುದಿಲ್ಲ ಎಂದು ನಯವಾಗಿ ಹೇಳಿದರು.