ETV Bharat / state

ಸಮ್ಮಿಶ್ರ ಸರ್ಕಾರ ಕೆಡವಿದ ಆ 17 ಮಂದಿಗೂ ನನಗೂ ಸಂಬಂಧ ಇಲ್ಲ: ಎನ್‌.ಮಹೇಶ್ - mysore latest news

ಕಾಂಗ್ರೆಸ್ ಸೇರಲು ಡಿ.ಕೆ ಶಿವಕುಮಾರ್​ ನನಗೇನು ಆಹ್ವಾನ ಕೊಟ್ಟಿಲ್ಲ, ಆ 17 ಮಂದಿಗೆ ಆಹ್ವಾನ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಿದ ಆ ಹದಿನೇಳು ಜನರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಎನ್​.ಮಹೇಶ್​ ಹೇಳಿದರು.

mahesh
ಶಾಸಕ ಎನ್​ ಮಹೇಶ್​ ಪ್ರತಿಕ್ರಿಯೆ
author img

By

Published : Jul 11, 2021, 3:37 PM IST

ಮೈಸೂರು: ಸಮ್ಮಿಶ್ರ ಸರ್ಕಾರ ಕೆಡವಿದ ಹದಿನೇಳು ಮಂದಿಗೂ ನನಗೂ ಸಂಬಂಧ ಇಲ್ಲ‌, ನಾನೇ ಬೇರೆ ಅವರೇ ಬೇರೆ. ಅವರ ಜೊತೆ ನಾನು ಗುರುತಿಸಿಕೊಂಡಿಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದರು.

ಶಾಸಕ ಎನ್​ ಮಹೇಶ್​ ಪ್ರತಿಕ್ರಿಯೆ

ಸಮ್ಮಿಶ್ರ ಸರ್ಕಾರ ಕೆಡವುದರಲ್ಲಿ ನನ್ನ ಪಾತ್ರವಿಲ್ಲ. ಯಡಿಯೂರಪ್ಪ ಸರ್ಕಾರ ರಚನೆಯಾಗಲೂ ನನ್ನ ಪಾತ್ರ ಇಲ್ಲ. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಿದಾಗ ನಾನು ಆಬ್ಸೆಂಟ್​ ಆಗಿದ್ದೆ. ಹಾಗಾಗಿ ಸರ್ಕಾರ ಬೀಳಿಸುವಲ್ಲಿ ಹಾಗೂ ರಚನೆ ಮಾಡುವಲ್ಲಿ ನನ್ನ ಪಾತ್ರವಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ವಿಶ್ವಾಸದಲ್ಲಿದ್ದೀನಿ. ನಾನು ಸದ್ಯಕ್ಕೆ ಯಾವ ಪಕ್ಷ ಸೇರುವ ಬಗ್ಗೆಯೂ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.

ಕೆಆರ್​ಎಸ್​ ಅಣೆಕಟ್ಟು ಬಿರುಕು ವಿವಾದ ವಿಚಾರವಾಗಿ ಮಾತನಾಡಿ, KRS ಆಣೆಕಟ್ಟೆ ಬಿರುಕು ಬಿಟ್ಟಿದೆ ಅನ್ನೋದು ಸೂಕ್ಷ್ಮ ವಿಚಾರ. ಸರ್ಕಾರದ ತಜ್ಞರು ಈ ಬಗ್ಗೆ ಪರೀಕ್ಷೆ ನಡೆಸಬೇಕು. ಜಲಸಂಪನ್ಮೂಲ ಇಲಾಖೆ ಇದೆ, ನೀರಾವರಿ ತಜ್ಞರಿದ್ದಾರೆ ಅವರು ನೋಡಿಕೊಳ್ತಾರೆ. ತಜ್ಞರು ಕೂಡಾ ಯಾವುದೇ ಬಿರುಕಿಲ್ಲ ಅಂತ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ರಾಜಕೀಯವಾಗಿ ಮಾತನಾಡಬಾರದು ಎಂದರು.

ಅಣೆಕಟ್ಟು ವಿವಾದದಲ್ಲಿ ಅಂಬರೀಶ್ ಸಾವಿನ ಪ್ರಸ್ತಾಪ ವಿಚಾರವಾಗಿ ಮಾತನಾಡಿ, 'ದಟ್ ಇಸ್ ವೆರಿ ಅನ್ ಫಾರ್ಚುನೆಟ್​​' ಅಂಬರೀಶ್ ಯಾವ ಪಕ್ಷದಲ್ಲಿದ್ರೂ ಎಲ್ಲರ ಜೊತೆ ಚೆನ್ನಾಗಿದ್ರು. ಅವರ ಹೆಸರನ್ನು ಮಧ್ಯೆ ತಂದು ರಾಜಕಾರಣ ಮಾಡಬಾರದು ಎಂದು ಹೇಳಿದರು.

ಇನ್ನು ಕೇಂದ್ರ ಸಂಪುಟ ಪುನರಾಚನೆಯಲ್ಲಿ ಎಸ್​​ಸಿ, ಎಸ್​ಟಿ ಹಾಗೂ ಹಿಂದುಳಿದ ವರ್ಗಗಳಿಗೆ‌ ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದು ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.