ETV Bharat / state

ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ? ಹೀಗೆ ಹೇಳುತ್ತೆ ಇತಿಹಾಸ! - ಚಾಮರಾಜರ ಪುತ್ರಿ ರಾಜಕುಮಾರಿ ದೇವಾಜಮ್ಮಣಿ

ನಾನಾ ಕೊಡುಗೆಗಳನ್ನು ನೀಡಿದ ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ ಎಂಬುದು ತುಂಬಾ ಕುತೂಹಲದಿಂದ ಕೂಡಿದೆ. ಈ ಸಂಸ್ಥಾನ ಹೇಗೆ ಹುಟ್ಟಿತ್ತು. ಯಾರು ಇದಕ್ಕೆ ಕಾರಣಕರ್ತರು ಎಂಬ ಮಾಹಿತಿ ಇಲ್ಲಿದೆ.

ಮೈಸೂರು ಸಂಸ್ಥಾನ
author img

By

Published : Sep 25, 2019, 6:41 PM IST

Updated : Sep 25, 2019, 10:50 PM IST

ಮೈಸೂರು: ಸಂಸ್ಥಾನದ ಸಾಂಸ್ಕೃತಿಕ ಕಲೆ, ದಸರಾ ವೈಭವ, ಕುಸ್ತಿ, ಕ್ರೀಡೆ, ಸಂಪ್ರದಾಯ ಹೀಗೆ ನಾನಾ ವಿಷಯಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಮೈಸೂರು ಸಂಸ್ಥಾನದ ಇತಿಹಾಸವನ್ನು ಹುಡುಕುತ್ತ ಹೋದರೆ ರೋಚಕ ಕತೆಗಳನ್ನು ಸವಿಯಬಹುದು. ಈ ಸಂಸ್ಥಾನವನ್ನು 26 ಮಹಾರಾಜರು ಆಳ್ವಿಕೆ ನಡೆಸಿ ತಮ್ಮದೇ ಆದ ಕೊಡುಗೆ ಎಲ್ಲ ಕ್ಷೇತ್ರದಲ್ಲಿ ಬಿಟ್ಟು ಹೋಗಿದ್ದಾರೆ.

ನಾನಾ ಕೊಡುಗೆಗಳನ್ನು ನೀಡಿದ ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ ಎಂಬುವುದು ತುಂಬಾ ಕುತೂಹಲದಿಂದ ಕೂಡಿದೆ. 1399ರಲ್ಲಿ ಮೈಸೂರು ಸಂಸ್ಥಾನ ಬುನಾದಿಯಾಗಿದೆ ಎಂಬ ಮಾತಿದೆ. ಆದರೆ ಖಚಿತತೆ ಇನ್ನೂ ನಿಖರವಾಗಿಲ್ಲ. ಸಿಕ್ಕ ಮಾಹಿತಿಯನ್ನೇ ಓದುಗರಿಗೆ ನೀಡಲಾಗಿದೆ. ದ್ವಾರಕಾ ಪಟ್ಟಣದ ರಾಜದೇವನ ಮಕ್ಕಳಾದ ಯದುರಾಯ ಮತ್ತು ಕೃಷ್ಣರಾಯ ಎಂಬ ಯುವರಾಜರು. ಪುರಾಣ ಪ್ರಸಿದ್ಧ ಯಾದವಗಿರಿ (ಮೇಲುಕೋಟೆ)ಗೆ ಬಂದು ತಮ್ಮ ಮನೆ ದೇವರಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.

ಮೈಸೂರು ಸಂಸ್ಥಾನದ ಹುಟ್ಟು ಹೇಗೆ..?

ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ ಎಂಬುವರು ಆಡಳಿತ ನಡೆಸಿ ತೀರಿಕೊಂಡಿದ್ದರು. ಇವರಿಗೆ ಹೆಂಡತಿ ಹಾಗೂ ಸುಂದರ ಮಗಳಿದ್ದರು. ಪಾಳೆಗಾರ ಚಾಮರಾಜರು ಕಾಲವಾದ ಬಳಿಕ ಮೈಸೂರು ಸೀಮೆಯ ದಳವಾಯಿ ಆಗಿದ್ದ ಕೊರಗಳ್ಳಿ ಮಾರನಾಯಕ ಇವರಿಗೆ ಹಿಂಸೆ ನೀಡಲು ಆರಂಭಿಸಿದ್ದ. ಚಾಮರಾಜರ ಪುತ್ರಿ ರಾಜಕುಮಾರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸತೊಡಗಿದನು.

ಈತನ ಹಿಂಸೆಯಿಂದ ಬೇಸತ್ತ ಮಹಾರಾಣಿ ಜಂಗಮರ ಸಹಾಯದಿಂದ ಯದುರಾಯ ಮತ್ತು ಕೃಷ್ಣರಾಯರ ಮಧ್ಯೆ ಸಂಧಾನ ನಡೆಸಿ ಅವರ ಸಹಕಾರದಿಂದ ಮಾರನಾಯಕನನ್ನು ಕೊಂದು ಬಳಿಕ ಯದುರಾಯನಿಗೆ ತನ್ನ ಮಗಳು ದೇವಾಜಮ್ಮಣಿಯನ್ನು ಕೊಟ್ಟು ವಿವಾಹ ಮಾಡುವ ಮೂಲಕ ಮೈಸೂರಿನಲ್ಲಿ ಯದುವಂಶದ ಹುಟ್ಟಿಗೆ ಕಾರಣರಾದರು ಎಂದು ಹೇಳಲಾಗುತ್ತದೆ. ಮೈಸೂರು ಸಂಸ್ಥಾನವನ್ನು ರಾಜ - ಮಹಾರಾಜರು ಆಳ್ವಿಕೆ ಮಾಡಿ ಸಾರ್ವಜನಿಕರಿಂದ ಸೈ ಎನ್ನಿಸಿಕೊಂಡರು.

Intro:ಅರಮನೆBody:ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ?
ಮೈಸೂರು: - ಮೈಸೂರು ಸಂಸ್ಥಾನದ ಸಾಂಸ್ಕøತಿಕ ಕಲೆ, ದಸರಾ ವೈಭವ, ಕುಸ್ತಿ, ಕ್ರೀಡೆ, ಸಂಪ್ರದಾಯ ಹೀಗೆ ನಾನಾ ವಿಷಯಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಮೈಸೂರು ಸಂಸ್ಥಾನ ಪ್ರಾರಂಭದ ಇತಿಹಾಸವನ್ನು ಹುಡುಕುತ್ತ ಹೋದರೆ ರೋಚಕತೆಗಳನ್ನು ಸವಿಯ ಬಹುದು. ಅಷ್ಟು ಅದ್ಭುತವಾಗಿದೆ ಪರಂಪರೆ, ರಾಜಪರಂಪರೆಯನ್ನು 26 ಮಹಾರಾಜ ಆಳ್ವಿಕೆ ನಡೆಸಿ ತಮ್ಮದೆಯಾದ ಕೊಡುಗೆಯನ್ನು ಎಲ್ಲ ಕ್ಷೇತ್ರದಲ್ಲಿ ಬಿಟ್ಟು ಹೋಗಿದ್ದಾರೆ.
ನಾನಾ ಕೊಡುಗೆಗಳನ್ನು ನೀಡಿದ ಮೈಸೂರು ಸಂಸ್ಥಾನ ಹುಟ್ಟಿದ್ದಾದರೂ ಹೇಗೆ ಎಂಬುವುದು ತುಂಬ ಕುತೂಹಲದಿಂದ ಕೂಡಿರುವ ಕಥೆ ಓದಿ. 1399ರಲ್ಲಿ ಮೈಸೂರು ಸಂಸ್ಥಾನಗೆ ಬುನಾದಿಯಾಗಿದೆ ಎಂಬ ಮಾತಿದೆ.ಆದರೆ ಖಚಿತತೆ ಇನ್ನೂ ನಿಖರವಾಗಿಲ್ಲ. ಸಿಕ್ಕಿ ಮಾಹಿತಿಯನ್ನೆ  ಓದುಗರಿಗೆ ನೀಡಿದೆ.
ದ್ವಾರಕಾಪಟ್ಟಣದ ರಾಜದೇವನ ಮಕ್ಕಳಾದ ಯದುರಾಯ ಮತ್ತು ಕೃಷ್ಣರಾಯ ಎಂಬ ಯುವರಾಜರು. ಪುರಾಣ ಪ್ರಸಿದ್ದ ಯಾದವಗಿರಿ(ಮೇಲುಕೋಟೆ)ಗೆ ಬಂದು ತಮ್ಮ ಮನೆ ದೇವರಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.
ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ ಎಂಬುವರು ಆಡಳಿತ ನಡೆಸಿ ತೀರಿಕೊಂಡಿದ್ದರು. ಇವರಿಗೆ ಹೆಂಡತಿ ಹಾಗೂ ಸುಂದರ ಮಗಳಿದ್ದರು. ಪಾಳೆಗಾರ ಚಾಮರಾಜರು ಕಾಲವಾದ ಬಳಿಕ ಮೈಸೂರು ಸೀಮೆಯ ದಳವಾಯಿಯಾಗಿದ್ದ ಕೊರಗಳ್ಳಿ ಮಾರನಾಯಕ ಇವರಿಗೆ ಹಿಂಸೆ ನೀಡಲು ಆರಂಭಿಸಿದ್ದ.
ಚಾಮರಾಜರ ಪುತ್ರಿ ರಾಜಕುಮಾರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸತೊಡಗಿದನು. ಈತನ ಹಿಂಸೆಯಿಂದ ಬೇಸತ್ತ ಮಹಾರಾಣಿ ಜಂಗಮರ ಸಹಾಯದಿಂದ ಯದುರಾಯ ಮತ್ತು ಕೃಷ್ಣರಾಯರ ಮಧ್ಯೆ ಸಂಧಾನ ನಡೆಸಿ ಅವರ ಸಹಕಾರದಿಂದ ಮಾರನಾಯಕನನ್ನು ಕೊಂದು ಬಳಿಕ ಯದುರಾಯನಿಗೆ ತನ್ನ ಮಗಳು ದೇವಾಜಮ್ಮಣಿಯನ್ನು ಕೊಟ್ಟು ವಿವಾಹ ಮಾಡುವ ಮೂಲಕ ಮೈಸೂರಿನಲ್ಲಿ ಯದುವಂಶದ ಹುಟ್ಟಿಗೆ ಕಾರಣರಾದರು ಎಂದು ಹೇಳಲಾಗುತ್ತದೆ. ಮೈಸೂರು ಸಂಸ್ಥಾನವನ್ನು ರಾಜ-ಮಹಾರಾಜರು ಆಳ್ವಿಕೆ ಮಾಡಿ ಸಾವಱಜನಿಕರಿಂದ ಸೈ ಎನ್ನಿಸಿಕೊಂಡರು.

ಅರಮನೆ ನಿವೃತ್ತ ಗೈಡ್ ಮಾದನಾಯಕ ಅವರ ಬೈಟ್ ಅನ್ನು ಮೊಜೊ‌ ಮೊಬೈಲ್ ನಲ್ಲಿ ಕಳುಹಿಸಲಾಗಿದೆ.Conclusion:ಅರಮನೆ
Last Updated : Sep 25, 2019, 10:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.