ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಆಚರಣೆಯ ಸಿದ್ಧತೆ ಭರದಿಂದ ಸಾಗಿದ್ದು, ಈ ಮಧ್ಯೆ ಕಳೆದ 5 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಹಸ್ತ ಮಳೆಯಿಂದಾಗಿ ನಗರದ ಕೆಲಸ ಕಾರ್ಯಗಳು ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಈ ವರ್ಷ ಸರಳ ಹಾಗೂ ಸಾಂಪ್ರದಾಯಿಕ ದಸರಾ ನಡೆಸಲು ಸಿದ್ದತೆಗಳನ್ನು ಮಾಡಲಾಗುತ್ತಿದೆ, ಆದರೆ ಹಸ್ತ ಮಳೆಯ ಅಬ್ಬರ ಜೋರಾದ ಹಿನ್ನೆಲೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ. ದಸರಾ ಸಿದ್ಧತೆಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕಲಾಗಿದ್ದು, ವರುಣನ ಆರ್ಭಟಕ್ಕೆ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ.
ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ನಗರದಲ್ಲಿನ ದೀಪಾಲಂಕಾರ ಕಾರ್ಯಕ್ಕೂ ಮಳೆರಾಯ ಅಡ್ಡಿಯುಂಟು ಮಾಡಿದೆ.