ಮೈಸೂರು: ಅರಮನೆಯಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಸಿಎಆರ್ನ ಹೆಡ್ ಕಾನ್ಸ್ಟೇಬಲ್, ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಖದೇವ್ ಬಡಾವಣೆಯಲ್ಲಿ ನಡೆದಿದೆ.
ಹೇಮೇಶ್ ಆರಾಧ್ಯ (43) ನೇಣಿಗೆ ಶರಣಾದ ಕಾನ್ಸ್ಟೇಬಲ್. ಇವರು ಸಿಎಆರ್ನಿಂದ ಅರಮನೆಯ ಭದ್ರತಾ ಕಾರ್ಯದಲ್ಲಿ ಕಾರ್ಯನಿರ್ವಹಿಸುತಿದ್ದರು.
ಓದಿ:ಮೈಸೂರು ಏರ್ಪೋರ್ಟ್ಗೆ ಜಯಚಾಮರಾಜ ಒಡೆಯರ್ ಹೆಸರಿಡಲು ಮನವಿ
ಬುಧವಾರ ಕರ್ತವ್ಯ ನಿರ್ವಹಿಸಿ ಮನೆಗೆ ಬಂದ ಇವರು, ಹೆಂಡತಿಗೆ ಅಡುಗೆ ಮಾಡಲು ಹೇಳಿ ಬೆಡ್ ರೂಂಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ. ಬಹಳ ಸಮಯ ರೂಂನಿಂದ ಹೊರ ಬರದಿದ್ದಾಗ ಹೆಂಡತಿ ಹಾಗೂ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಹೇಮೇಶ್ ಗಾಯಗೊಂಡಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.