ETV Bharat / state

ಗ್ರಾ.ಪಂ. ಚುನಾವಣೆ : 10 ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದ ಅಬಕಾರಿ ಇಲಾಖೆ - ಅಬಕಾರಿ ಇಲಾಖೆ ದಾಳಿ

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಗರದ ವಿವಿಧ ಕಡೆ ಅಬಕಾರಿ ಇಲಾಖೆ ದಾಳಿ ನಡೆಸಿ ಸುಮಾರು 10 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕಕೊಂಡು 18 ವಾಹನಗಳನ್ನ ಜಪ್ತಿ ಮಾಡಿದೆ.

ಅಬಕಾರಿ ಇಲಾಖೆ ದಾಳಿ
Excise Department attack
author img

By

Published : Dec 20, 2020, 11:56 AM IST

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಅಲರ್ಟ್​ ಆಗಿರುವ ಮೈಸೂರು ಗ್ರಾಮಾಂತರ ಅಬಕಾರಿ ಇಲಾಖೆ, ವಿವಿಧ ಕಡೆ ದಾಳಿ ನಡೆಸಿ ಸುಮಾರು 10 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕಕೊಂಡು 18 ವಾಹನಗಳನ್ನ ಜಪ್ತಿ ಮಾಡಿದ್ದಾರೆ.

Excise Department attack
ಅಬಕಾರಿ ಇಲಾಖೆ ವಶಕ್ಕೆ ಪಡೆದಿರುವ ಕಾರು

ಅಬಕಾರಿ ಉಪ ಆಯುಕ್ತೆ ಡಾ. ಮಹಾದೇವಿ ನೇತೃತ್ವದಲ್ಲಿ ದಾಳಿ ಮಾಡಿದ ಅಬಕಾರಿ ಪೊಲೀಸರು, 10 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. 553.192 ಲೀ. ಮದ್ಯ ಮತ್ತು 16.470 ಲೀ. ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

ಓದಿ: ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ವಜ್ಜಲ್​ ಬಳಿ 16 ಜೀವಂತ ಗುಂಡುಗಳು ಪತ್ತೆ: ಮಾಜಿ ಶಾಸಕ ಪೊಲೀಸ್​ ವಶಕ್ಕೆ

ಗ್ರಾ.ಪಂ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗ ಅಕ್ರಮ ಮದ್ಯ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈ ಮಧ್ಯೆ ಅಬಕಾರಿ ಪೊಲೀಸರು ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ 165 ಕಡೆ ದಾಳಿ ನಡೆಸಿ, 102 ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.