ETV Bharat / state

ಮೈಸೂರು ಮೃಗಾಲಯಕ್ಕೆ ವಿದೇಶದಿಂದ ಬಂದ ಅಪರೂಪದ ಅತಿಥಿಗಳು - ಮೈಸೂರು ಮೃಗಾಲಯಕ್ಕೆ ಎರಡು ಒರಾಂಗೂಟಾನ್

ಮೈಸೂರು ಮೃಗಾಲಯಕ್ಕೆ ಜರ್ಮನ್, ಸಿಂಗಪೂರ್ ಹಾಗೂ ಮಲೇಷಿಯಾದಿಂದ ಎರಡು ಗೊರಿಲ್ಲಾ ಮತ್ತು ಎರಡು ಒರಾಂಗೂಟಾನ್ ಆಗಮಿಸಿವೆ. ಕೋವಿಡ್‌ ಮುಂಜಾಗ್ರತೆ ದೃಷ್ಟಿಯಿಂದ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

gorillas arrives mysore zoo from abroad
ಗೊರಿಲ್ಲಾಗಳು
author img

By

Published : Oct 2, 2021, 6:12 PM IST

ಮೈಸೂರು: ಮೈಸೂರು ಮೃಗಾಲಯಕ್ಕೆ ನೂತನ ಅತಿಥಿಗಳು ಆಗಮಿಸಿದ್ದು, ವನ್ಯಜೀವಿ ಸಪ್ತಾಹದ ದಿನವಾದ ಇಂದು ಜರ್ಮನ್, ಸಿಂಗಾಪೂರ್ ಹಾಗೂ ಮಲೇಷಿಯಾದ ಅತಿಥಿಗಳಾದ ಎರಡು ಗೊರಿಲ್ಲಾ ಮತ್ತು ಎರಡು ಒರಾಂಗೂಟಾನ್ ಆಗಮಿಸಿವೆ.

ಮೈಸೂರು ಮೃಗಾಲಯದ ಆಕರ್ಷಣೀಯ ಕೇಂದ್ರಬಿಂದುವಾಗಿದ್ದ 'ಪೋಲೋ' ಎಂಬ ಗೊರಿಲ್ಲಾದ ವೃದ್ಧಾಪ್ಯದಿಂದ ಅದು ಸಾವನ್ನಪ್ಪಿದ ನಂತರ ಗೊರಿಲ್ಲಾವನ್ನು ಮೈಸೂರಿಗೆ ತರಲು ಸತತ ಪ್ರಯತ್ನ ನಡೆಸಲಾಗಿತ್ತು. ಇದರ ಫಲವಾಗಿ 2 ಗೊರಿಲ್ಲಾ ಹಾಗೂ ಎರಡು ಒರಂಗೂಟಾನ್​​ಗಳನ್ನು ಮೈಸೂರಿಗೆ ತರಿಸಿಕೊಳ್ಳಲಾಗಿದೆ.

ಎರಡು ಗಂಡು ಗೊರಿಲ್ಲಾಗಳಾದ ತಾಬೊ (14 ವರ್ಷ), ಡೆಂಬ (8 ವರ್ಷ) ಜರ್ಮನಿಯಿಂದ ಕೊಡುಗೆಯಾಗಿ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವಂತಹ ಬಿಡಾರದ ವ್ಯವಸ್ಥೆಯನ್ನು ಇನ್ಫೋಸಿಸ್‌ ಮಾಡಿಕೊಟ್ಟಿದೆ.

ಮಲೇಷಿಯಾ, ಸಿಂಗಪೂರ್‌ನಿಂದ ತಲಾ 2 ಒರಾಂಗೂಟಾನ್ ಬಂದಿದ್ದು, ಮಲೇಷಿಯಾದ ಅಫಾ( ಗಂಡು- 5 ವರ್ಷ), ಮಿನ್ನಿ (ಹೆಣ್ಣು-7 ವರ್ಷ) ಸಿಂಗಾಪೂರ್ ಮೃಗಾಲಯದಿಂದ ತರಿಸಿರುವ ಮೆರ್ಲಿನ್ (ಗಂಡು-17 ವರ್ಷ), ಅಟಿನಾ (ಹೆಣ್ಣು- 13 ವರ್ಷ) ಮೈಸೂರು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ.

15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳ ಆಗಮನವಾಗಿದ್ದು, ಕೋವಿಡ್‌ ಮುಂಜಾಗ್ರತೆ ದೃಷ್ಟಿಯಿಂದ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಶೀಘ್ರವೇ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.