ETV Bharat / state

ಮೈಸೂರು: ಬಾಲಕಿಯ ಹೊಟ್ಟೆಯಲ್ಲಿತ್ತು ಅರ್ಧ ಕೆಜಿ ತಲೆಕೂದಲಿನ ಗೆಡ್ಡೆ! - ETv Bharat kannada news

ಬಾಲಕಿಯ ಹೊಟ್ಟೆಯಲ್ಲಿದ್ದ ತಲೆಕೂದಲ ಗೆಡ್ಡೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಅಪೋಲೊ ಆಸ್ಪತ್ರೆ ವೈದ್ಯರು ಹೊರತೆಗೆದಿದ್ದಾರೆ. ನೆತ್ತಿಯಿಂದ ತಲೆಕೂದಲು ತೆಗೆದು ತಿನ್ನುವ ಅಭ್ಯಾಸವನ್ನು ಆಕೆ ಅಭ್ಯಾಸ ಮಾಡಿಕೊಂಡಿದ್ದೇ ಇದಕ್ಕೆ ಕಾರಣವಾಗಿದೆ.

half kg hair tumor was detected
ಅರ್ಧ ಕೆಜಿ ತಲೆಕೂದಲಿನ ಗೆಡ್ಡೆ ಪತ್ತೆ
author img

By

Published : Dec 30, 2022, 8:47 PM IST

ಮೈಸೂರು : 11 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಅರ್ಧ ಕೆಜಿಯಷ್ಟಿದ್ದ ತಲೆಕೂದಲಿನ ಗೆಡ್ಡೆ ಪತ್ತೆಯಾಗಿದ್ದು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದಿದ್ದಾರೆ. 8 ತಿಂಗಳಿನಿಂದ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಹಲವು ಬಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೂ ವೈದ್ಯರಿಗೆ ಹೊಟ್ಟೆನೋವು ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ನೋವು ತಾಳಲಾರದೇ ಬಾಲಕಿ ಶಾಲೆಯಿಂದಲೂ ಹೊರಗುಳಿಯಬೇಕಾಗಿತ್ತು. ನಂತರ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ನಡೆಸಿದ್ದು ಹೊಟ್ಟೆಯಲ್ಲಿ ಕೂದಲಿನ ಗೆಡ್ಡೆ ಇರುವುದು ಗೊತ್ತಾಗಿದೆ. ಆಹಾರ ಪದಾರ್ಥಗಳೊಂದಿಗೆ ಸೇರಿದ 15×20×5 ಸೆಂಟಿಮೀಟರ್ ಗಾತ್ರದ ಅರ್ಧ ಕೆಜಿ ಕೂದಲಿನ ಗೆಡ್ಡೆಯನ್ನು ಮುಖ್ಯ ಸರ್ಜಿಕಲ್​ ಗ್ಯಾಸ್ಟ್ರೋಡಂಟರಾಲಜಿಸ್ಟ್​ ಡಾ.ನೈರುತ್ಯ ಶಿವತೀರ್ಥನ್​ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಈಗ ಬಾಲಕಿ ಹೊಟ್ಟೆ ನೋವಿನಿಂದ ಮುಕ್ತಳಾಗಿದ್ದಾಳೆ.

ಕೂದಲಿನ ಗೆಡ್ಡೆ ಬೆಳೆಯಲು ಕಾರಣವೇನು?: ಶಸ್ತ್ರಚಿಕಿತ್ಸೆಯ ನಂತರ ಬಾಲಕಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಆಕೆ, ತಾನು ಒತ್ತಡದ ಸಂದರ್ಭದಲ್ಲಿ ನೆತ್ತಿಯ ಕೂದಲು ಕೀಳುವುದು ಮತ್ತು ಅದನ್ನು ತಿನ್ನುವ ಅಭ್ಯಾಸ ಹೊಂದಿದ್ದೆ ಎಂದು ಹೇಳಿದ್ದಾಳೆ. ಕಳೆದ ಎರಡು ವರ್ಷಗಳಿಂದ ಆಕೆ ಇದೇ ರೀತಿ ಕೂದಲನ್ನು ತಿನ್ನುತ್ತಿದ್ದಳಂತೆ. ಈ ಅಭ್ಯಾಸದ ಪರಿಣಾಮ ಹೊಟ್ಟೆಯಲ್ಲಿ ಕೂದಲಿನ ಗೆಡ್ಡೆ ಬೆಳೆದಿದೆ ಎಂಬ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ವೃದ್ಧೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ ಗೆಡ್ಡೆ ಹೊರ ತೆಗೆದ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.