ಮೈಸೂರು: ನಮ್ಮ ದೇಶದಲ್ಲಿ ಸಾಹಿತಿಯಿಂದ ಹಿಡಿದು ಸಂತನವರೆಗೆ ಪೂರ್ಣ ಪ್ರಮಾಣದಲ್ಲಿ ಯಾರು ಇಲ್ಲ ಎಂದು ವಿಧಾನಪರಿಷತ್ನ ನೂತನ ಸದಸ್ಯ ಎಚ್.ವಿಶ್ವನಾಥ್ ತಮ್ಮ ರಾಜಕೀಯ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಾವು ಪೂರ್ಣ ಪ್ರಮಾಣದಲ್ಲಿ ಇದ್ದರೆ. ನಮ್ಮ ಹೆಂಡತಿಯೂ ನಮ್ಮನ್ನು ಬಿಟ್ಟು ಹೋಗುತ್ತಾರೆ. ರಾಜಕೀಯ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಅದೇ ರೀತಿ ನಾವು ಸಹ ಅದನ್ನ ಪೂರ್ಣ ಪ್ರಮಾಣದಲ್ಲಿ ಮಾಡಲು ಆಗಲ್ಲ, ಎಲ್ಲವು ಬದಲಾಗುತ್ತದೆ ಎಂದರು.
ಸಾಹಿತಿಯ ಲೇಖನವನ್ನ ಯಾರು ತಡೆಯಲು ಆಗಲ್ಲ. ಜನತಂತ್ರ ವ್ಯವಸ್ಥೆಯಲ್ಲಿಯೂ ಅಷ್ಟೆ ಯಾರೂ ತಡೆಯಲು ಆಗಲ್ಲ. ನಾವು ಮಾಡಿದ್ದು ಇಡೀ ದೇಶಕ್ಕೆ ಒಂದು ಮಾದರಿ ಆಯಿತು ಎಂದರು. ನಾವು ಆಡಳಿತ ಪಕ್ಷದಿಂದ ಪ್ರತಿಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು.ಇದನ್ನ ಜನರಿಗೆ ಅರ್ಥ ಆಗೋ ರೀತಿ ಬರೆಯಬೇಕು. ನಾವು ಅನುಭವಿಸಿದ್ದನ್ನ ನಾವು ಬರೆಯಲೇಬೇಕು ಎಂದರು.
ಸರ್ಕಾರ ನನ್ನ ಕೈಯನ್ನ, ನನ್ನ ಬರವಣಿಗೆಯನ್ನ ಕಟ್ಟಿ ಹಾಕಲು ಸಾಧ್ಯವಿಲ್ಲ. ಮಾನವ ಸಂಬಂಧಗಳಿಗೆ ಒಂದು ಅರ್ಥ ಇರುವುದು ಭಾರತದಲ್ಲಿ. ನಮ್ಮ ತಂದೆ ತಾಯಿಗಳಿಗೆ ಏನಾದ್ರು ಆದರೆ ಸಾವಿರಾರು ಕಿಲೋಮೀಟರ್ಗಳಿಂದ ಬರುತ್ತೇವೆ. ಇದೇ ಭಾರತದ ಮಾನವೀಯ ಧರ್ಮ ಎಂದರು.
ಯಾರು ಕೈ ಹಿಡಿದರೋ ಬಿಟ್ಟರೋ ಗೊತ್ತಿಲ್ಲ.ಆದರೆ ನನ್ನನ್ನ ಕನ್ನಡ ಕೈ ಹಿಡಿದಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಹೊನ್ನಕಳಸವಾಗುತ್ತೆ ಈ ಕವಿ ವಾಣಿ ನನ್ನ ವಿಚಾರದಲ್ಲಿ ಸಾರ್ಥಕತೆ ತಂದಿದೆ ಎಂದರು.