ETV Bharat / state

ಪೌರ ಕಾರ್ಮಿಕರಿಗೆ ಇನ್ನು ನಿತ್ಯ ಉಚಿತ ಉಪಾಹಾರ

ಮೈಸೂರು ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ನಿತ್ಯ ಉಚಿತ ಉಪಾಹಾರ ನೀಡುವ ಯೋಜನೆಗೆ ಮೇಯರ್ ಚಾಲನೆ ನೀಡಿದರು.

author img

By

Published : Nov 16, 2019, 8:03 PM IST

ಪೌರ ಕಾರ್ಮಿಕರಿಗೆ ಇನ್ನು ಪ್ರತಿದಿನ ಬೆಳಿಗ್ಗೆ ಉಚಿತ ಉಪಾಹಾರ

ಮೈಸೂರು: ಮೈಸೂರಿನ ನಗರಪಾಲಿಕೆಯ 2,500 ಪೌರ ಕಾರ್ಮಿಕರಿಗೆ ಬೆಳಗಿನ ಉಚಿತ ಉಪಾಹಾರ ಯೋಜನೆಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಪಾಲಿಕೆಯ ಸದಸ್ಯರು ರಾಜೀವ್ ನಗರದ ಮಾದೇಗೌಡ ವೃತ್ತದಲ್ಲಿ ಚಾಲನೆ ನೀಡಿದರು.

ಮೈಸೂರು ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ನಿತ್ಯವೂ ಉಚಿತ ಉಪಾಹಾರ ನೀಡುವ ಯೋಜನೆಗೆ ಮೇಯರ್ ಚಾಲನೆ ನೀಡಿದ್ದು, ಏಕಕಾಲದಲ್ಲಿ ಮೈಸೂರಿನ ಎಲ್ಲ 65 ವಾರ್ಡ್​ಗಳಲ್ಲೂ ಪೌರ ಕಾರ್ಮಿಕರಿಗೆ ಉಚಿತ ಉಪಾಹಾರ ವಿತರಿಸಲಾಯಿತು. 2,168 ಹಾಗೂ ಒಳಚರಂಡಿ ವಿಭಾಗದ 238 ಸೇರಿದಂತೆ ಒಟ್ಟು 2,500 ಪೌರ ಕಾರ್ಮಿಕರಿಗೆ ಉಪಾಹಾರವನ್ನು ಪಾಲಿಕೆಯಿಂದ ಒದಗಿಸಲಾಗಿದೆ. ನಿತ್ಯವೂ ದಿನಕ್ಕೊಂದು ರೀತಿಯ ಉಪಾಹಾರ ನೀಡಲಾಗುವುದು. ಹಾಗೂ ಎಲ್ಲ ವಾರ್ಡ್​ಗಳಿಗೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ ಪೂರೈಕೆಯಾಗುತ್ತದೆ ಎಂದು ಉಪಾಹಾರದ ಗುತ್ತಿಗೆದಾರ ಮಂಜುನಾಥ್ ತಿಳಿಸಿದ್ದಾರೆ.

ಪೌರ ಕಾರ್ಮಿಕರು ತಮ್ಮ ಸಂತಸ ವ್ಯಕ್ತಪಡಿಸಿದ್ದು, ಹೀಗೆ ನಮಗೆ ನಿತ್ಯ ಉಚಿತ ಉಪಾಹಾರ ನೀಡುವ ಯೋಜನೆ ಬಗ್ಗೆ ಖುಷಿ ಇದೆ. ನಮ್ಮನ್ನೂ ಗುರುತಿಸಿ ಈ ಯೋಜನೆ ತಂದಿರುವುದು ಸಂತಸದ ವಿಷಯವಾಗಿದೆ. ಅಲ್ಲದೆ ಮೊದಲ ದಿನ ನೀಡಲಾದ ಉಪ್ಪಿಟ್ಟು , ಕೇಸರಿಬಾತ್, ಸಿಹಿ ತಿಂದು ಆಹಾರದ ಗುಣಮಟ್ಟದ ಬಗ್ಗೆ ನಮಗೆ ಮೆಚ್ಚುಗೆ ಇದೆ. ದಿನವೂ ಇದೇ ಗುಣಮಟ್ಟದ ಉಪಾಹಾರ ಸಿಗುತ್ತೆಂಬ ಆಶಯವಿದೆ ಎಂದು ಪೌರ ಕಾರ್ಮಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Intro:ಮೈಸೂರು: ಮೈಸೂರಿನ ನಗರಪಾಲಿಕೆಯ ೨,೫೦೦ ಪೌರ ಕಾರ್ಮಿಕರಿಗೆ ಬೆಳಗಿನ ಉಚಿತ ಉಪಾಹಾರ ಯೋಜನೆಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಪಾಲಿಕೆಯ ಸದಸ್ಯರು ರಾಜೀವ್ ನಗರದ ಮಾದೇಗೌಡ ವೃತ್ತದಲ್ಲಿ ಚಾಲನೆ ನೀಡಿದರು.Body:

ಮೈಸೂರು ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ಪ್ರತಿ ದಿನವೂ ಉಚಿತ ಉಪಾಹಾರ ನೀಡುವ ಯೋಜನೆಗೆ ಮೇಯರ್ ಚಾಲನೆ ನೀಡಿದ್ದು , ಏಕಕಾಲದಲ್ಲಿ ಮೈಸೂರಿನ ಎಲ್ಲಾ ೬೫ ವಾರ್ಡ್ ಗಳಲ್ಲೂ ಪೌರ ಕಾರ್ಮಿಕರಿಗೆ ಉಚಿತ ಉಪಾಹಾರ ವಿತರಿಸಲಾಯಿತು. ೨,೧೬೮ ಹಾಗೂ ಒಳಚರಂಡಿ ವಿಭಾಗದ ೨೩೮ ಸೇರಿದಂತೆ ಒಟ್ಟು ೨,೫೦೦ ಪೌರ ಕಾರ್ಮಿಕರಿಗೆ ಉಪಾಹಾರವನ್ನು ಪಾಲಿಕೆಯಿಂದ ಒದಗಿಸಲಾಗಿದೆ. ಪ್ರತಿದಿನವೂ ದಿನಕ್ಕೊಂದು ರೀತಿಯ ಉಪಾಹಾರವನ್ನು ನೀಡಲಾಗುವುದು. ಹಾಗೂ ಎಲ್ಲಾ ವಾರ್ಡ್ ಗಳಿಗೆ ಬೆಳಿಗ್ಗೆ ೮ ರಿಂದ ೯ ಗಂಟೆಯೊಳಗೆ ಪೂರೈಕೆಯಾಗುತ್ತದೆ ಎಂದು ಉಪಾಹಾರದ ಗುತ್ತಿಗೆದಾರ ಮಂಜುನಾಥ್ ತಿಳಿಸಿದ್ದಾರೆ.

ಪೌರ ಕಾರ್ಮಿಕರು ತಮ್ಮ ಸಂತಸ ವ್ಯಕ್ತಪಡಿಸಿದ್ದು ಹೀಗೆ

ನಮಗೆ ಪ್ರತಿದಿನವೂ ಉಚಿತ ಉಪಾಹಾರ ನೀಡುವ ಯೋಜನೆ ಬಗ್ಗೆ ಖುಷಿ ಇದೆ. ನಮ್ಮನ್ನೂ ಗುರುತಿಸಿ ಈ ಯೋಜನೆ ತಂದಿರುವುದು ಸಂತಸದ ವಿಷಯವಾಗಿದೆ. ಅಲ್ಲದೆ ಮೊದಲ ದಿನ ನೀಡಲಾದ ಉಪ್ಪಿಟ್ಟು , ಕೇಸರಿಬಾತ್, ಸಿಹಿ ತಿಂದು ಆಹಾರದ ಗುಣಮಟ್ಟದ ಬಗ್ಗೆ ನಮಗೆ ಮೆಚ್ಚುಗೆ ಇದೆ, ಪ್ರತಿದಿನವೂ ಇದೇ ಗುಣಮಟ್ಟದ ಉಪಾಹಾರ ಸಿಗುತ್ತೆಂಬ ಆಶಯವಿದೆ ಎಂದು ಪೌರ ಕಾರ್ಮಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.Conclusion:

For All Latest Updates

TAGGED:

Mysore news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.