ಮೈಸೂರು: ಹೊಸ ವರ್ಷಾಚರಣೆ ನಿಮಿತ್ತ ಮಡಿಕೇರಿಗೆ ಹೋಗುತ್ತಿದ್ದ ಪ್ರವಾಸಿಗರನ್ನು ಬೆದರಿಸಿ ಅವರಿಂದ ಚಿನ್ನ ಮತ್ತು ಹಣ ಎಗರಿಸಿದ್ದ ನಾಲ್ವರು ದರೋಡೆಕೋರರನ್ನು 12 ಗಂಟೆಯೊಳಗೆ ಬಂಧಿಸುವಲ್ಲಿ ಹುಣಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ನಿವಾಸಿಗಳಾದ ಪ್ರದೀಪ್ ಮತ್ತು ಆತನ ಸ್ನೇಹಿತರು ಹೊಸ ವರ್ಷಾಚರಣೆಗೆಗಾಗಿ ಸೋಮವಾರ ರಾತ್ರಿ ಮಡಿಕೇರಿಗೆ ತೆರಳುತ್ತಿದ್ದರು. ಈ ವೇಳೆ ಹುಣಸೂರು-ಮೈಸೂರು ರಸ್ತೆ ಪಕ್ಕ ಊಟಕ್ಕೆ ಹೋಟೆಲ್ ತೋರಿಸುವ ನೆಪದಲ್ಲಿ ಆರೋಪಿಗಳು ಚಾಕು ತೋರಿಸಿ 20 ಗ್ರಾಂ. ಚಿನ್ನ, ನಗದು ಹಾಗೂ ಕಾರಿನ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ದೂರು ದಾಖಲಾದ 12 ಗಂಟೆಯೊಳಗೆ ಹುಣಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.