ETV Bharat / state

ಕೈಕೊಟ್ಟ ಬೆಳೆ... ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ಸಾಲಸೂಲ ಮಾಡಿ ಬೆಳೆದ ಬೆಳೆ ಕೈ ಕೊಟ್ಟಿದ್ದರಿಂದ ಆತ್ಮಹತ್ಯೆಗೆ ಶರಣಾದ ರೈತ.

ಕೈಕೊಟ್ಟ ಬೆಳೆ.. ಸಾಲಕ್ಕೆ ಹೆದರಿದ ರೈತ ಆತ್ಮಹತ್ಯೆ
author img

By

Published : Apr 21, 2019, 8:29 PM IST

ಮೈಸೂರು: ಸಾಲಬಾಧೆ ತಾಳಲಾರದೇ ರೈತನೋರ್ವ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಗೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹಂಚಿಪುರ ಗ್ರಾಮದ ಹೆಚ್.ವಿ.ರಾಜಪ್ಪ(55) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಹೊಗೆ ಸೊಪ್ಪು ಹಾಗೂ ಹತ್ತಿ ಬೆಳೆಯಲು ಎಸ್‌ಬಿಎಂ ಬ್ಯಾಂಕ್‌ನಿಂದ 8 ಲಕ್ಷ ರೂಪಾಯಿ ಹಾಗೂ ವಿವಿಧೆಡೆ 3 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೆ ಮನನೊಂದ ರಾಜಪ್ಪ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ರೈತ ಆತ್ಮಹತ್ಯೆBody:ಕೈಕೊಟ್ಟ ಬೆಳೆ ಸಾಲಕ್ಕೆ ಹೆದರಿದ ರೈತ ಆತ್ಮಹತ್ಯೆ
ಮೈಸೂರು: ಸಾಲಬಾಧೆ ತಾಳಲಾರದೇ ಮನನೊಂದ ರೈತನೋರ್ವ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಗೂರು ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಹಂಚಿಪುರ ಗ್ರಾಮದ ಎಚ್.ವಿ.ರಾಜಪ್ಪ(೫೫) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿರುವ ತಮ್ಮ ೩ ಎಕರೆ ಜಮೀನಿನಲ್ಲಿ ಹೊಗೆ ಸೊಪ್ಪು ಹಾಗೂ ಹತ್ತಿ ಬೆಳೆಯಲು ಎಸ್‌ಬಿಎಂ ಬ್ಯಾಂಕ್‌ನಿಂದ ೮ ಲಕ್ಷ ರೂ. ಹಾಗೂ ವಿವಿಧೆಡೆಗಳಿಂದ ೩ ಲಕ್ಷ ಕೈ ಸಾಲ ಮಾಡಿಕೊಂಡಿದ್ದರು.ಆದರೆ ಬೆಳೆ ಕೈಕೊಟ್ಟಿದ್ದರಿಂದ ಮನನೊಂದ ರಾಜಪ್ಪ ಅವರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಮೃತರು ಅಗಲಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion: ರೈತ ಆತ್ಮಹತ್ಯೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.