ETV Bharat / state

ಇಂಡಿಯಾದಲ್ಲಿ ಒಡಕು ಬರಬಾರದು ಎಂದು ಕೇಳುವುದಕ್ಕಿಂತ ಮುಂಚೆಯೇ ನೀರು ಬಿಟ್ಟಿದ್ದಾರೆ : ಮಾಜಿ ಸಚಿವ ಸಿ ಟಿ ರವಿ - ಈಟಿವಿ ಭಾರತ್ ಕನ್ನಡ ಸುದ್ದಿ

ಮೈಸೂರಿನ ಬಿಜೆಪಿ ಕಚೇರಿಯಲ್ಲಿ 'ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ' ಎಂಬ ಪುಸ್ತಕವನ್ನು ಮಾಜಿ ಸಚಿವ ಸಿ ಟಿ ರವಿ ಬಿಡುಗಡೆಗೊಳಿಸಿದ್ದಾರೆ.

ಮಾಜಿ ಸಚಿವ ಸಿ ಟಿ ರವಿ
ಮಾಜಿ ಸಚಿವ ಸಿ ಟಿ ರವಿ
author img

By ETV Bharat Karnataka Team

Published : Aug 29, 2023, 8:59 PM IST

ಮಾಜಿ ಸಚಿವ ಸಿ ಟಿ ರವಿ

ಮೈಸೂರು : ಚುನಾವಣೆಗೂ ಮುನ್ನ ಕಾಂಗ್ರೆಸ್​ನವರು ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದ್ದರು. ಈಗ ತಮಿಳುನಾಡಿಗೆ ನೀರನ್ನು ಬಿಟ್ಟು ಈ ಹಕ್ಕನ್ನು ಡಿಎಂಕೆಗೆ ಒತ್ತೆ ಇಟ್ಟಿದ್ದಾರೆ. ಈಗ ಇಂಡಿಯಾದಲ್ಲಿ ಒಡಕು ಬರಬಾರದು ಎಂದು ರಾಜ್ಯ ಹಾಳಾದರು ಪರವಾಗಿಲ್ಲ ಎಂಬ ನೀತಿಗೆ ಕಾಂಗ್ರೆಸ್​ನವರು ಬಂದು, ನಮ್ಮ ರೈತರ ಹಕ್ಕನ್ನು ಕಿತ್ತುಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿ ಟಿ ರವಿ ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್​ನ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ 'ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ, ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಗೂ ಮುನ್ನ ನಮ್ಮ ನೀರು, ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದ್ದರು. ಈಗ ತಮಿಳುನಾಡಿಗೆ ನೀರು ಬಿಟ್ಟು ಹಕ್ಕನ್ನು ಡಿಎಂಕೆಗೆ ಒತ್ತೆ ಇಟ್ಟಿದ್ದಾರೆ. ಅವರು ನೀರು ಕೇಳುವುದಕ್ಕಿಂತ ಮುಂಚೆಯೇ ನೀರು ಬಿಟ್ಟಿದ್ದಾರೆ. ಏಕೆಂದರೆ ಇಂಡಿಯಾದಲ್ಲಿ ಒಡಕು ಬರಬಾರದು ಎಂದು. ನಮ್ಮ ರಾಜ್ಯದ ನೀರು ಖಾಲಿಯಾದರೂ ಪರವಾಗಿಲ್ಲ. ನಮ್ಮ ರೈತರಿಗೆ ಅನ್ಯಾಯವಾದರೂ ಪರವಾಗಿಲ್ಲ, ಇಂಡಿಯಾ ಟೀಮ್​ನಲ್ಲಿ ಒಡಕು ಬರಬಾರದು ಎಂಬುದು ಇವರ ನೀತಿಯಾಗಿದೆ ಎಂದು ಸಿ ಟಿ ರವಿ ಕಾಂಗ್ರೆಸ್ ಪಕ್ಷದವರಿಗೆ ರಾಜ್ಯದಲ್ಲಿ ಬರಗಾಲ ಇದ್ದರೂ ಸಂಭ್ರಮ ಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಚಿತ ವಿದ್ಯುತ್ ನೀಡುತ್ತೇನೆ ಎಂದು ಮಹಾದೇವಪ್ಪನಿಗೂ, ಕಾಕಾಪಾಟೀಲ್​ಗೂ ಬರೆ ಹಾಕುತ್ತಿದ್ದಾರೆ. ಚುನಾವಣೆಗೂ ಮುಂಚೆ ಮುಖ್ಯಮಂತ್ರಿಯವರು ಗೃಹ ಜ್ಯೋತಿ, ಉಚಿತ ವಿದ್ಯುತ್ ಪ್ರತಿ ಮನೆಗೂ ನೀಡುತ್ತೇವೆ ಎಂದಿದ್ದರು. ಜೊತೆಗೆ ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಅಂದಿದ್ದರು. ಈಗ ಮಹದೇವಪ್ಪಗೂ ಬರೆ, ಕಾಕಾ ಪಾಟೀಲ್ ಗೂ ಬರೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅಗಾಧ ಅನುಭವವಿದೆ. ಮೂಲಸೌಕರ್ಯ, ಉದ್ಯೋಗ ಕುರಿತ ಯಾವ ಯೋಜನೆಗಳನ್ನು ಕಾಂಗ್ರೆಸ್ ಮಾಡಿಲ್ಲ. ರಾಜಕೀಯವಾಗಿ ಗುತ್ತಿಗೆದಾರರನ್ನು ಬಳಸಿಕೊಂಡರು. ಈಗ ಅವರಿಗೆ ಬಿಲ್ ಮಾಡಿಕೊಡದೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ಇಲ್ಲದಿದ್ದಾಗ ಮಹದಾಯಿ ಬಗ್ಗೆ ಮಾತನಾಡಿದ್ದರು. ಈಗ ಅದರ ಬಗ್ಗೆ ಸೊಲ್ಲು ಎತ್ತುತ್ತಿಲ್ಲ. ಎಸ್ಸಿ, ಎಸ್ಟಿ ಹಣವನ್ನೂ ದುರ್ಬಳಕೆ ಮಾಡಿಕೊಂಡು ದಲಿತರ ಹಿತಾಸಕ್ತಿಯನ್ನು ಮರೆತರು. ದಲಿತ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ, ಇದರ ಬಗ್ಗೆ ಧ್ವನಿ ಎತ್ತಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ ಟಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ನೂರು ದಿನ ಸಾವಿರಾರು ತಪ್ಪುಗಳು, ಈ ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ರದ್ದು ಮಾಡಿದ್ದಾರೆ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ ಯೋಜನೆ, ಕ್ಷೀರ ಸಮೃದ್ಧಿ ರದ್ದು ಮಾಡಿದ್ದಾರೆ. ಸ್ತ್ರೀ ಸಾಮರ್ಥ್ಯ ಜಲ ನಿಧಿ ಯೋಜನೆ, ವಿನಯ ಸಾಮರಸ್ಯ ಯೋಜನೆ, ವಿವೇಕ ಶಾಲಾ ಕೊಠಡಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಈ ಸರ್ಕಾರ ಕೈಬಿಟ್ಟಿದೆ. ಈಗ ಐದು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ ಎನ್ನುತ್ತಾರೆ.

ಅವರ ಬೆನ್ನನ್ನು ಅವರೇ ತಟ್ಟುತ್ತಿದ್ದಾರೆ. 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು. 5 ಕೆಜಿ ಕೊಡ್ತಿದ್ದಾರೆ. 5 ಕೆಜಿ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿ 3 ಕೆಜಿ ಕೊಡ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೆ ತಂದ್ರು. ಖಾಸಗಿ ಬಸ್ ಮಾಲೀಕರನ್ನು ಬೀದಿಗೆ ತಂದಿದ್ದಾರೆ.
ಎಲ್ಲರಿಗೂ 200 ಯೂನಿಟ್ ಫ್ರೀ ಅಂದಿದ್ದರು. ಕೊನೆಗೆ ಬಳಕೆಯ ಜೊತೆಗೆ 10% ಮಾತ್ರ ಅಂತ ಹೇಳಿದ್ದರು. ಸಣ್ಣ ಕೈಗಾರಿಕೆಗಳು ಉಳಿಯಲು ಕಷ್ಟ ಆಗುತ್ತಿದೆ. ಕರೆಂಟ್ ಲೋಡ್ ಶೆಡ್ಡಿಂಗ್ ಶುರು ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಹೋಗುವವರನ್ನ ಕಟ್ಟಿಹಾಕಲು ಸಾಧ್ಯವಿಲ್ಲ : ಸಿದ್ದರಾಮಯ್ಯ ಪ್ರಳಯ ಆದರೂ ನಮ್ಮ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಳ್ಳಲ್ಲ ಅಂದಿದ್ದರು. ಈಗ ಬಾಗಿಲು ತೆರೆದಿದೆ ಅನ್ನುತ್ತಿದ್ದಾರೆ. ಬಾಗಿಲು ತೆರೆದ ಮೇಲೆ ಒಳಗೂ ಹೋಗಬಹುದು, ಹೊರಗೆ ಬರಲೂಬಹುದು. ಹೋಗುವವರನ್ನು ಕಟ್ಟಿ ಹಾಕಲು ದನಗಳೆ? ಎಂದು ಪ್ರಶ್ನಿಸಿದ ಸಿ ಟಿ ರವಿ, ಈಗ ಇರುವವರನ್ನೇ ತಡೆಯಲು ಆಗುತ್ತಿಲ್ಲ. 66 ನಿಷ್ಠಾವಂತರು ಅಂತಾ ಭಾವಿಸಿದ್ದೇವೆ. ನನಗೆ ದೇಶ ಬಿಟ್ಟರೆ ಪಕ್ಷವೇ ಹೆಚ್ಚು. ನಾನು ಬೆದರಿಕೆಗೆ ಹೆದರುವವನಲ್ಲ ಎಂದರು.

ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಗೃಹಲಕ್ಷ್ಮಿ ಸಭೆ ವಿಚಾರಕ್ಕೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಏನಾದರೂ ಹೇಳಿದರೆ ನನ್ನನ್ನು ಪಕ್ಷದಿಂದ ಕಳುಹಿಸಲು ಸಿದ್ಧವಾಗಿದ್ದಾರೆ ಅನ್ನುತ್ತಾರೆ. ಆದ್ದರಿಂದ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಈ ಬಗ್ಗೆ ಎಸ್. ಟಿ ಸೋಮಶೇಖರ್ ಅವರ ಜೊತೆ ಮಾತನಾಡುತ್ತೇನೆ ಎಂದು ಸಿ ಟಿ ರವಿ ತಿಳಿಸಿದರು.

ಇದನ್ನೂ ಓದಿ: 'ಇಂಡಿಯಾ' ಗೋಸ್ಕರ ನೀರು ಬಿಟ್ಟಿದ್ದೀರಿ : ಸಿ ಟಿ ರವಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.