ETV Bharat / state

ಒಬ್ಬ ವ್ಯಕ್ತಿಯಿಂದ ಮೈಸೂರಿನಲ್ಲಿ ಐವರಿಗೆ ಕೊರೊನಾ ಸೋಂಕು!! - five corona cases noted in mysore

ಕೊರೊನಾ ಸೋಂಕಿತ ಜುಬಿಲಂಟ್​ ಕಾರ್ಖಾನೆಯ ಉದ್ಯೋಗಿಯ ಸಂಪರ್ಕಕ್ಕೆ ಬಂದಿದ್ದ 5 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

five corona cases noted in mysore
ಮೈಸೂರಿನಲ್ಲಿ 5 ಜನರಿಗೆ ಕೊರೊನಾ ಸೋಂಕು
author img

By

Published : Apr 11, 2020, 3:24 PM IST

ಮೈಸೂರು : ಜುಬಿಲಂಟ್ ಕಾರ್ಖಾನೆಯ ಒಬ್ಬ ಸೋಂಕಿತ ವ್ಯಕ್ತಿಯಿಂದ ಮತ್ತೆ ಐವರಿಗೆ ಕೊರೊನಾ ಸೋಂಕು ಹರಡಿರುವುದು ಇಂದು ದೃಢಪಟ್ಟಿದೆ.

ಜುಬಿಲಂಟ್ ಕಾರ್ಖಾನೆಯ ನೌಕರ p-88 ವ್ಯಕ್ತಿಯಿಂದ ಇಂದು ಇವರ ಸಂಬಂಧಿಕರೆನ್ನಲಾದ 5 ಜನಕ್ಕೆ ಕೊರೊನಾ ಸೋಂಕು ಹರಡಿರುವುದು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಇಂದು ಹೊಸ 5 ಪ್ರಕರಣ ಪತ್ತೆಯಾಗಿವೆ. ಒಟ್ಟು ಮೈಸೂರಲ್ಲಿ ಈವರೆಗೆ 47 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಈ ಪೈಕಿ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 45 ಮಂದಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಜುಬಿಲಂಟ್ ಕಾರ್ಖಾನೆಯ ನೌಕರರ ಪ್ರಾಥಮಿಕ ಸಂಪರ್ಕ ಹಾಗೂ ನಂತರದ ಸಂಪರ್ಕದ ಹಲವು ವ್ಯಕ್ತಿಗಳು ಈಗಾಗಲೇ ಕ್ವಾರಂಟೈನ್​​ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.