ETV Bharat / state

ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಬ್ಲ್ಯಾಕ್​ಮೇಲ್​: ಹಣಕ್ಕೆ ಬೇಡಿಕೆಯಿಟ್ಟ ತಂದೆ - ಮಗ - ಮೈಸೂರಿನಲ್ಲಿ ತಂದೆ ಮಗನಿಂದ ಮಹಿಳೆಗೆ ಬ್ಲ್ಯಾಕ್​ಮೇಲ್​

ಮನೆಯಲ್ಲಿ ಗೃಹಿಣಿ ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ನೆರೆಹೊರೆ ತಂದೆ - ಮಗ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್​ಮೇಲ್​ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ಕಂಡು ಬಂದಿದೆ.

bathing video blackmail to Woman in Mysore , father and son blackmail to Woman in Mysore, Mysore crime news, ಮೈಸೂರಿನಲ್ಲಿ ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಬ್ಲ್ಯಾಕ್​ಮೇಲ್, ಮೈಸೂರಿನಲ್ಲಿ ತಂದೆ ಮಗನಿಂದ ಮಹಿಳೆಗೆ ಬ್ಲ್ಯಾಕ್​ಮೇಲ್​, ಮೈಸೂರು ಅಪರಾಧ ಸುದ್ದಿ,
ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಬ್ಲ್ಯಾಕ್​ಮೇಲ್​
author img

By

Published : Jul 2, 2022, 1:23 PM IST

ಮೈಸೂರು: ಸ್ನಾನ ಮಾಡುವ ವಿಡಿಯೋ ಮಾಡಿ ಗೃಹಿಣಿಗೆ ಲೈಂಗಿಕ ದೌರ್ಜನ್ಯ ಹಾಗೂ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ತಂದೆ ಮಗನ ವಿರುದ್ಧ ನಗರದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹೆಬ್ಬಳಾ ಬಡಾವಣೆಯ ನಿವಾಸಿ ಪ್ರಮೋದ್ ಹಾಗೂ ಆತನ ತಂದೆ ಗೋವಿಂದರಾಜು ಮನೆಯ ಪಕ್ಕದಲ್ಲಿ ಕುಟುಂಬವೊಂದು ವಾಸಿಸುತ್ತಿದೆ. ಮಹಿಳೆಯ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಂದೆ - ಮಗ ಗುಪ್ತವಾಗಿ ಆಕೆಯ ಸ್ನಾನದ ವಿಡಿಯೋವನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದಾರೆ. ಬಳಿಕ ಕಳೆದ ಎರಡು ವರ್ಷಗಳಿಂದ ವಿಡಿಯೋ ತೋರಿಸಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು.

ಓದಿ: ಸ್ನಾನ ಮಾಡುವಾಗ ಮೂವರು ಬಾಲಕಿಯರು ನೀರುಪಾಲು: ಎರಡು ಮೃತದೇಹಗಳು ಹೊರಕ್ಕೆ

ಹಣ ಕೊಡದಿದ್ದರೆ ಈ ವಿಡಿಯೋವನ್ನ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದರು. ಜೊತೆಗೆ ನನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಇದರಿಂದ ರೋಸಿಹೋದ ಮಹಿಳೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೇಲಿನ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.