ಮೈಸೂರು: ಸರಳ ಹಾಗೂ ಸಂಪ್ರದಾಯಿಕ ದಸರಾವನ್ನು ಯಶಸ್ವಿಗೊಳಿಸಿ, ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ಮತ್ತೆ ಕಾಡಿಗೆ ಮರಳಿದವು.
ಲಾರಿ ಏರಿದ ಅಭಿಮನ್ಯು ಮತ್ತಿಗೋಡು ಆನೆ ಶಿಬಿರಕ್ಕೆ ತೆರಳಿದರೆ. ವಿಕ್ರಮ, ಗೋಪಿ, ಕಾವೇರಿ, ವಿಜಯ ಆನೆಗಳು ದುಬಾರೆ ಆನೆ ಶಿಬಿರಕ್ಕೆ ಮರಳಿದವು. ಅಕ್ಟೋಬರ್ 2 ರಂದು ಅರಮನೆ ಪ್ರವೇಶಿಸಿದ ಈ ಐದು ಆನೆಗಳು ಅರಮನೆ ಬಿಟ್ಟು ಆಚೆ ಕದಲಿರಲಿಲ್ಲ. ಮಾವುತರು ಹಾಗೂ ಕಾವಾಡಿಗಳು ಹೇಳಿದ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ದಸರಾದಲ್ಲಿ ಸೈ ಎನ್ನಿಸಿಕೊಂಡವು.
ಬೀಳ್ಕೊಡುಗೆ ಮುನ್ನ ಅಭಿಮನ್ಯು, ವಿಜಯ, ಕಾವೇರಿ, ವಿಕ್ರಮ, ಗೋಪಿ ಆನೆಗಳಿಗೆ ಸಂಪ್ರದಾಯ ಹಾಗೂ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು. ನಂತರ ಅರಣ್ಯಾಧಿಕಾರಿಗಳು ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲ ತಾಂಬೂಲು ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.