ETV Bharat / state

ಮೈಸೂರು: ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಬಂಧನ - ಈಟಿವಿ ಭಾರತ ಕನ್ನಡ

ಮಾದಕ ವಸ್ತು ಮಾರಾಟ - ಕಾನೂನು ವಿದ್ಯಾರ್ಥಿ ಮತ್ತು ವಕೀಲ ಬಂಧನ - ಮಾರಾಟದಲ್ಲಿ ತೊಡಗಿದ್ದ ವೇಳೆ ಖಾಕಿ ಬಲೆಗೆ

Drug peddler Arrested
ಮಾದಕ ವಸ್ತು ಮಾರಾಟ
author img

By

Published : Dec 26, 2022, 6:07 PM IST

ಮೈಸೂರು: ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 31ಗ್ರಾಂ ಎಂಡಿಎಂಎ, ಎಕ್ಟೆಸಿ ಟ್ಯಾಬ್ಲೆಟ್, ಎಲ್​ಎಸ್​ಡಿ ಡ್ರಗ್ಸ್​, 5000 ರೂ. ಹಣ, ಎರಡು ಮೊಬೈಲ್​ ಮತ್ತು ಬೈಕ್​ ವಶಪಡಿಸಿಕೊಳ್ಳಲಾಗಿದೆ.

ಬಂಧಿತರಲ್ಲಿ ಒಬ್ಬಾತ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ವಕೀಲ ವೃತ್ತಿಯಲ್ಲಿ ಇದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಇವರಿಬ್ಬರು ಡಿ.23 ರಂದು ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬ್ಲಾಕ್​ ಆದಿಚುಂಚನಗಿರಿ ರಸ್ತೆಯಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಈ ವೇಳೆ, ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಸಂಬಂಧ ಅಶೋಕಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರು ಸದರಿ ಮಾದಕ ವಸ್ತುವನ್ನು ಎಲ್ಲಿಂದ ತರುತ್ತಿದ್ದರು ಮತ್ತು ಮೈಸೂರಿನಲ್ಲಿ ಯಾರಿಗೆಲ್ಲಾ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಸರಬರಾಜು: ಬಿಹಾರ ಮೂಲದ ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.