ETV Bharat / state

100ನೇ ಘಟಿಕೋತ್ಸವ ಸಂಭ್ರಮದಲ್ಲಿರುವ ಮೈಸೂರು ವಿವಿಗೆ ಡಬಲ್​ ಧಮಾಕಾ! - ಮೈಸೂರು ವಿವಿ ಘಟಿಕೋತ್ಸವ

ಆರಂಭದಿಂದಲೂ ದೇಶದ ಪ್ರಧಾನಿಗಳು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ‌ ಭಾಷಣ ಮಾಡಲಿದ್ದಾರೆ. ಅಲ್ಲದೇ, ಇದೇ ಮೊದಲ ಬಾರಿಗೆ 600 ಮಂದಿ ಪಿಹೆಚ್​ಡಿ ಪಡೆಯುತ್ತಿದ್ದಾರೆ.

Mysore VV
ಮೈಸೂರು ವಿವಿ
author img

By

Published : Oct 13, 2020, 6:55 PM IST

ಮೈಸೂರು: ಶತಮಾನೋತ್ಸವ ಸಂಭ್ರಮ ಪೂರೈಸುವ ಮೂಲಕ‌ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಮೈಸೂರು ವಿಶ್ವವಿದ್ಯಾನಿಲಯವು 100ನೇ ಘಟಿಕೋತ್ಸವದಂದು ಡಬಲ್ ಧಮಾಕಕ್ಕೆ ಕ್ರಾಫಡ್೯ ಹಾಲ್ ವೇದಿಕೆಯಾಗಲಿದೆ.

ಹೌದು, ಆರಂಭದಿಂದಲೂ ದೇಶದ ಪ್ರಧಾನಿಗಳು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ‌ ಭಾಷಣ ಮಾಡಲಿದ್ದಾರೆ. ಅಲ್ಲದೇ, 600 ಮಂದಿ ಪಿಹೆಚ್​ಡಿ ಪಡೆಯುತ್ತಿರುವುದು ಕೂಡ ಇದೇ ಮೊದಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಆಕ್ಟೋಬರ್ 18ರಂದು ನಡೆಯಲಿರುವ 100ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಸಂಭ್ರಮ ಕಣ್ತುಂಬಿಕೊಳ್ಳಲು ಬರುತ್ತಿದ್ದ ಪೋಷಕರಿಗೆ ಪ್ರವೇಶವಿಲ್ಲ. ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗೆ ಸಾಂಕೇತಿಕವಾಗಿ 30 ಮಂದಿಗೆ ಪಿಹೆಚ್​ಡಿ ಪ್ರದಾನ ಮಾಡಲಾಗುವುದು. ಅಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ‌ಯ ಜಾರಿ ಮಾಡಲು ಮೈಸೂರು ವಿವಿ ಮುಂದಾಗಲಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಫೆಬ್ರವರಿಯಲ್ಲಿ 100ನೇ ಘಟಿಕೋತ್ಸವ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿತ್ತು. ‌ಆದರೆ, ಪ್ರಧಾನಿ ಮೋದಿ ಅವರಿಗೆ ಸಮಯದ ಅಭಾವವಿರುವುದರಿಂದ ಅಕ್ಟೋಬರ್ 18ರಂದು ಕಾರ್ಯಕ್ರಮ ನಿಗದಿ ಮಾಡಲಾಗಿದೆ. ವರ್ಚುವಲ್ ಮೂಲಕ ಮೋದಿ ಅವರು ಭಾಷಣ ಮಾಡಲಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.