ಮೈಸೂರು : ಕೊರೊನಾ ಸೋಂಕಿನಿಂದ ಇಂದು 4 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಮುಖವಾಗುತ್ತಿದೆ.
ರೋಗಿ ಸಂಖ್ಯೆ 321,270,365,366 ಈ ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ. ಜಿಲ್ಲೆಯ ಒಟ್ಟು 90 ಕೊರೊನಾ ಪ್ರಕರಣಗಳ ಪೈಕಿ 62 ಮಂದಿ ಈವರೆಗೆ ಡಿಸ್ಚಾಜ್೯ ಆಗಿದ್ದು, 28 ಮಂದಿ ಸಕ್ರಿಯ ರೋಗಿಗಳಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.