ಮೈಸೂರು: ದೇಶದಲ್ಲಿ ಬಿಜೆಪಿ ಪಕ್ಷ ಅಂಡರ್ ವರ್ಲ್ಡ್ ರಾಜಕಾರಣ ಮಾಡಲು ಹೊರಟಿದೆ ಎಂದು ಸಾಹಿತಿ ದೇವನೂರು ಮಹದೇವ ಆರೋಪಿಸಿದ್ದಾರೆ.
ಓದಿ: ಫ್ರೀಡಂ ಪಾರ್ಕ್ನಲ್ಲಿ ರೈತ ಮುಖಂಡರಿಂದ ಉಪವಾಸ ಸತ್ಯಾಗ್ರಹ: ಸಿದ್ದರಾಮಯ್ಯ ಸಾಥ್
ಇಂದು ಗಾಂಧಿ ವೃತ್ತದಲ್ಲಿ ರೈತರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿ ದೇವನೂರು ಮಹಾದೇವ, ಬಿಜೆಪಿ ಪಕ್ಷ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ನೀತಿಯಲ್ಲಿ ಆಡಳಿತ ನಡೆಸದೆ ಅಂಡರ್ ವರ್ಲ್ಡ್ ರಾಜಕಾರಣ ಮಾಡಲು ಹೊರಟಿದೆ.
ಇವತ್ತು ಆಹಿಂಸಾ ಮೂರ್ತಿ ಗಾಂಧಿಯವರನ್ನು ಗೋಡ್ಸೆ ಹತ್ಯೆ ಮಾಡಿದ ದಿನ. ಇಂದು ಗೋಡ್ಸೆ ಸಂತಾನವೇ ಆಡಳಿತ ನಡೆಸುತ್ತಿದೆ. ಯಾವ ರೀತಿ ಎಂದರೆ ಒಂದು ಕಡೆ ಎಲ್ಲರನ್ನು ಹತ್ಯೆ ಮಾಡ್ತಾ ಜೊತೆಗೆ ಪ್ರಜಾಪ್ರಭುತ್ವದ ಅಂಗ ಸಂಸ್ಥೆಗಳು ಸಹ ಹತ್ಯೆ ಆಗುತ್ತಿವೆ ಎಂದು ದೇವನೂರು ಮಹಾದೇವ ಟೀಕಿಸಿದರು.
ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದ ರೈತ ಮುಖಂಡರನ್ನು ಸಹ ಇವತ್ತು ತೊಂದರೆ ಕೊಡುತ್ತಿವೆ. ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತು ಮಾಡುವುದಾಗಿ ಕೇಂದ್ರ ಹೇಳಿದೆ. ಏಕೆಂದರೆ ಒಂದಷ್ಟು ರಾಜ್ಯಗಳಲ್ಲಿ ಚುನಾವಣೆ ಇದೆ. ಮುಂದಿನ ದಿನಗಳಲ್ಲಿ ಸೇನೆ ಬಳಸಿ ಶ್ರೀರಾಮನ ನೆಪ ಇಟ್ಟುಕೊಂಡು ಕಾಣಿಕೆ ಸಂಗ್ರಹಿಸುವ ನೆಪದಲ್ಲಿ ಈ ಕಾನೂನುಗಳನ್ನು ಛಿದ್ರ ಮಾಡುವ ಹುನ್ನಾರ ಅಡಗಿದೆ ಎಂದರು.