ಮೈಸೂರು: ಆಹಾರ ಅರಸಿ ಬಂದ ಜಿಂಕೆಯೊಂದು ನಾಯಿ ದಾಳಿಗೆ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕೋಣನೂರು ಗ್ರಾಮದ ಹೊರವಲಯದ ಕಾಡಿನಿಂದ ಆಹಾರ ಅರಸಿ ಯೋಗೇಶ್ ಎಂಬವರ ಜಮೀನಿಗೆ ಬಂದಿದ್ದ ಜಿಂಕೆಯ ಮೇಲೆ ನಾಯಿ ದಾಳಿ ನಡೆಸಿದೆ. ಜಮೀನು ಮಾಲೀಕ ಜಿಂಕೆಯನ್ನು ರಕ್ಷಿಸಲು ಪ್ರಯತ್ನಪಟ್ಟರೂ, ಗಂಭೀರ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿದೆ. ಜಿಂಕೆ ಮೇಲೆ ನಾಯಿ ದಾಳಿ ಮಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿವೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.