ETV Bharat / state

ಮೈಸೂರಲ್ಲಿ ಕೊಕ್ಕರೆಗಳ ಸಾವು: ಜನರಲ್ಲಿ ಹಕ್ಕಿ ಜ್ವರ ಭೀತಿ

author img

By

Published : Mar 9, 2020, 4:28 PM IST

ಮೈಸೂರಲ್ಲಿ 12 ಕೊಕ್ಕರೆಗಳು ಸಾವನ್ನಪ್ಪಿವೆ. ಇದರಿಂದ ಕೊರೊನಾ ಜೊತೆಗೆ ಹಕ್ಕಿ ಜ್ವರದ ಭೀತಿಯೂ ಕೂಡ ಜನರಲ್ಲಿ ಶುರುವಾಗಿದೆ.

ಹಕ್ಕಿಜ್ವರದ ಭೀತಿ
ಹಕ್ಕಿಜ್ವರದ ಭೀತಿ

ಮೈಸೂರು: ಕಳೆದ ಒಂದು ವಾರದಿಂದ ಈವರೆಗೆ ನಗರದ ಚಾಮುಂಡಿಪುರಂನಲ್ಲಿ 12 ಕೊಕ್ಕರೆಗಳು ಸಾವನಪ್ಪಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

ನಗರದ ಚಾಮುಂಡಿಪುರಂ ಭಾಗದಲ್ಲಿ ಕಳೆದ ಒಂದು ವಾದದಿಂದ 12 ಕೊಕ್ಕರೆಗಳು ಸಾವನ್ನಪ್ಪಿವೆ. ಸ್ಥಳೀಯರಿಗೆ ಕೊರೊನಾ ಜೊತೆಗೆ ಹಕ್ಕಿಜ್ವರದ ಭೀತಿ ಕೂಡ ಶುರುವಾಗಿದೆ. ಸ್ಥಳಕ್ಕೆ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ನೇತೃತ್ವದ ತಂಡ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಸತ್ತ ಕೊಕ್ಕರೆಗಳ ಸ್ಯಾಂಪಲ್​ಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

Death of storks in Mysore
ಕೊಕ್ಕರೆಯನ್ನು ವೀಕ್ಷಿಸುತ್ತಿರುವ ಸ್ಥಳೀಯರು

ವರದಿ ಬಂದ ನಂತರ ನಿಜವಾದ ಕಾರಣ ತಿಳಿಯಬಹುದಾಗಿದೆ. ಜನರು ಹಕ್ಕಿಜ್ವರ ಎಂದು ಭಯಭೀತರಾಗಬೇಡಿ ಎಂದು ಆರೋಗ್ಯ ಅಧಿಕಾರಿ ನಾಗರಾಜ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.