ETV Bharat / state

ಮೈಸೂರು : ಕೆರೆಯಲ್ಲಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ!

ಸ್ಥಳಕ್ಕೆ ಶ್ವಾನದಳವೂ ಆಗಮಿಸಿದೆ. ಈ ದೃಶ್ಯ ನೋಡಲು ಕೆರೆಯ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಟ್ಟರು‌..

dead body found in the lake of mysore
ಕೆರೆಯಲ್ಲಿ ಅಪರಿಚಿತ ಶವ ಪತ್ತೆ
author img

By

Published : Jun 25, 2021, 4:04 PM IST

ಮೈಸೂರು : ಪಿರಿಯಾಪಟ್ಟಣ ಬಿಎಂಮುಖ್ಯ ರಸ್ತೆಯಲ್ಲಿರುವ ಅರಸಿನಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ‌.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬಿಎಂಮುಖ್ಯ ರಸ್ತೆಯಲ್ಲಿರುವ ಅರಸಿನ ಕೆರೆಯಲ್ಲಿ ಇಂದು ಬೆಳಗ್ಗೆ ಅಪರಿಚಿತ ಶವ ಗೋಣಿ ಚೀಲದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೆರೆಯಲ್ಲಿ ತೇಲುತ್ತಿರುವ ಅಪರಿಚಿತ ಶವವನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿಯ ಸಹಾಯದೊಂದಿಗೆ ಹೊರ ತೆಗೆದಿದ್ದಾರೆ.

ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಸುಮಾರು 40 ರಿಂದ 45ರ ವಯಸ್ಸಿನ ಪುರುಷ ಮೃತದೇಹವಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಯಾರೂ ಸನ್ಯಾಸಿ ಅಲ್ಲ, ರಮೇಶ್​ ಸಚಿವರಾಗೋದಕ್ಕೆ ಪ್ರಯತ್ನಪಟ್ಟರೆ ತಪ್ಪೇನು? : ಸಚಿವ ಕೆ ಎಸ್‌ ಈಶ್ವರಪ್ಪ

ಸ್ಥಳಕ್ಕೆ ಶ್ವಾನದಳವೂ ಆಗಮಿಸಿದೆ. ಈ ದೃಶ್ಯ ನೋಡಲು ಕೆರೆಯ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಟ್ಟರು‌. ಘಟನೆ ಸಂಬಂಧ ಸ್ಥಳೀಯ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.