ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನ 11 ತಿಂಗಳ ಬಳಿಕ ಇಂದು ಬಾಗಿಲನ್ನು ತೆರೆದಿದೆ.
2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಆವರಿಸಿದ ಹಿನ್ನೆಲೆ ಎಲ್ಲಾ ದೇವಾಲಯಗಳಿಗೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಮಾಡಲಾಗುತ್ತಿತ್ತು. ನಂತರ ಸೆಪ್ಟೆಂಬರ್ನಲ್ಲಿ ಕೋವಿಡ್ ಎಚ್ಚರಿಕೆ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಆದರೀಗ ದಾಸೋಹ ಭವನಗಳು ತೆರೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ ಬಳಿಕ ಭಾನುವಾರದಿಂದ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸಮೀಪವಿರುವ ದಾಸೋಹ ಭವನ ಭಕ್ತಾದಿಗಳಿಗೆ ಮುಕ್ತವಾಗಿದೆ. ಬರೋಬ್ಬರಿ 11 ತಿಂಗಳ ಬಳಿಕ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಓದಿ: ಒಂದೇ ವೇದಿಕೆಯಲ್ಲಿ ಹಾಲಿ-ಮಾಜಿ ಸಿಎಂ ಪುತ್ರರು: ವಿಜಯೇಂದ್ರ-ಯತೀಂದ್ರ ಕುಶಲೋಪರಿ
ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು, ನಂತರ ಹೋಟೆಲ್ಗಳಿಗೆ ತೆರಳಿ ದುಡ್ಡು ಕೊಟ್ಟು ಊಟ ಮಾಡಬೇಕಾಗಿತ್ತು. ಆದ್ರೀಗ ದೇವಸ್ಥಾನದಲ್ಲಿಯೇ ಪ್ರಸಾದ ವ್ಯವಸ್ಥೆ ಮತ್ತೆ ಮುಂದುವರೆಯುತ್ತಿರುವುದರಿಂದ ಭಕ್ತರಿಗೆ ಖುಷಿಯಾಗಿದೆ.