ETV Bharat / state

Mysore crime: ಕೆಲಸ ಇಲ್ಲದವನೆಂದು ಬೈದು ಬುದ್ಧಿವಾದ ಹೇಳಿದ್ದ ಅಜ್ಜಿಯನ್ನು ಕೊಂದು ಸುಟ್ಟುಹಾಕಿದ್ದ ಮೊಮ್ಮಗ: ಆರೋಪಿ ಬಂಧನ - grandmother who told him that he was unemployed

ಅಜ್ಜಿಯನ್ನು ಹೊಡೆದು ಸಾಯಿಸಿ, ಕೆಆರ್​ಎಸ್ ಹಿನ್ನೀರಿನ ನಿರ್ಜನ ಪ್ರದೇಶಕ್ಕೆ ಒಯ್ದು ಸುಟ್ಟು ಹಾಕಿರುವ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರು ದಿನದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

mysore
ಮೈಸೂರು
author img

By

Published : Jun 8, 2023, 6:48 PM IST

ಮೈಸೂರು: ಅಜ್ಜಿ ದಿನನಿತ್ಯ ಬೈಯುತ್ತಿದ್ದಕ್ಕೆ ಬೇಸತ್ತು ಕೋಪದಿಂದ ಮೊಮ್ಮಗ ಅಜ್ಜಿಯನ್ನೇ ಕೊಂದು ನಂತರ ಸುಟ್ಟುಹಾಕಿದ ಘಟನೆ ನಗರದ ಗಾಯತ್ರಿ ಪುರಂನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ನಗರದ ಗಾಯತ್ರಿ ಪುರಂ ನಿವಾಸಿ ಸುಪ್ರೀತ್ (23) ಬಂಧಿತ ಆರೋಪಿ. ಈತ ತನ್ನ ಅಜ್ಜಿ ಸುಲೋಚನಾ (75) ಅವರನ್ನು ಕೊಲೆಗೈದಿದ್ದ. ಮನೆಯಲ್ಲಿ ಸದಾ ತನಗೆ ಕೆಲಸ ಇಲ್ಲದವನು ಎಂದು ಅಜ್ಜಿ ಬೈಯುತ್ತಿದ್ದಳು. ಇದರಿಂದ ಬೇಸತ್ತು ಅಜ್ಜಿಯನ್ನು ಹೊಡೆದು ಸಾಯಿಸಿ, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಬಾಕ್ಸ್​ದಲ್ಲಿ ಹಾಕಿಕೊಂಡು, ಕೆಆರ್​​​ಎಸ್ ಹಿನ್ನೀರಿಗೆ ತೆಗೆದುಕೊಂಡು ಹೋಗಿದ್ದ. ಕೆ ಆರ್ ಎಸ್ ಹಿನ್ನೀರಿನ ನಿರ್ಜನ ಪ್ರದೇಶದಲ್ಲಿ ಅಜ್ಜಿ ಶವವನ್ನು ಒಂದು ಗುಂಡಿಯಲ್ಲಿ ಹಾಕಿ ಸುಟ್ಟು ಹಾಕಿದ್ದು, ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಮ್ಮಗ ಸುಪ್ರಿತ್ ಸ್ಥಳದಿಂದ ಪರಾರಿಯಾಗಿದ್ದನು. ಈ ಘಟನೆ ಕುರಿತಾಗಿ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಚಾರಣೆ ವೇಳೆ ತಿಳಿದ ಸತ್ಯಾಂಶ.. ಅರೆಬೆಂದ ಸ್ಥಿತಿಯಲ್ಲಿದ್ದ ಅಜ್ಜಿಯ ಶವ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರು ಗಾಯತ್ರಿಪುರಂ ಮನೆಗೆ ಬಂದು ತನಿಖೆ ಆರಂಭಿಸಿದಾಗ ಏನು ಗೊತ್ತಿಲ್ಲದಂತೆ ಇದ್ದ ಮೊಮ್ಮಗ ಸುಪ್ರಿತ್​ನನ್ನು ವಶಕ್ಕೆ ಪಡೆದು ವಿಚಾರಿಸಿದ್ದರು.

ಈ ವೇಳೆ ಮೊಮ್ಮಗ ಅಜ್ಜಿಯನ್ನು ಕೊಂದಿದ್ದು ತಾನೇ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಅಜ್ಜಿಯ ಅರೆಬೆಂದ ಶವ ಸಿಕ್ಕ ಅರು ದಿನದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅಭಿನಂದಿಸಿದ್ದಾರೆ. ಅಜ್ಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಹತ್ಯೆಗೈದ ಕುಟುಂಬ.. ಮದುವೆ ಆಗಿ ಮೂರು ವರ್ಷಗಳಾದರೂ ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕೊಲೆಗೈದಿರುವ ಆತಂಕಕಾರಿ ಘಟನೆ ಬೆಳಗಾವಿ ಜಿಲ್ಲೆಯ ಜಿಲ್ಲೆಯ ಹುಕ್ಕೇರಿ ತಾಲೂಕು ಯಮಕನಮರಡಿಯಲ್ಲಿ ನಡೆದಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶ್ರೀದೇವಿ ದೀಪಕ್ ಬೇವಿನಕಟ್ಟಿ (31) ಕೊಲೆಯಾದ ಮಹಿಳೆ. ದಿನನಿತ್ಯ ಅತ್ತೆ ಸೊಸೆ ಮಧ್ಯೆ ಜಗಳ ನಡೆಯುತ್ತಿತ್ತು. ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಶ್ರೀದೇವಿಯನ್ನು ಗಂಡ ದೀಪಕ್ ರಾಮಚಂದ್ರ ಬೇವಿನಕಟ್ಟಿ, ಅವಳ ಅತ್ತೆ ಪದ್ಮಾವತಿ ಹಾಗೂ ಮೃತಳ ಮಾವ ರಾಮಚಂದ್ರ ಬೇವಿನಕಟ್ಟಿ ಮೂವರು ಸೇರಿ ಸೊಸೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಯಮಕರಮಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.