ETV Bharat / state

ಮೈಸೂರಲ್ಲಿ ಕೋವಿಡ್ ಆಸ್ಪತ್ರೆಯಿಂದ ವೃದ್ಧ ನಾಪತ್ತೆ: ಭದ್ರತಾ ವೈಫಲ್ಯದ ಆರೋಪ - ಕೊರೊನಾ ಸೋಂಕಿತ ನಾಪತ್ತೆ

ಕೋವಿಡ್ ಆಸ್ಪತ್ರೆಯಲ್ಲಿದ್ದ ಓರ್ವ ಸೋಂಕಿತ ವೃದ್ಧ ನಾಪತ್ತೆಯಾಗಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

covid patient missing
ಸೋಂಕಿತ ವೃದ್ಧ ನಾಪತ್ತೆ
author img

By

Published : Jul 27, 2020, 10:25 AM IST

ಮೈಸೂರು: ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಇವರು ಕೆ.ಆರ್​. ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿತ್ತು.

76 ವರ್ಷ ವಯಸ್ಸಿನ ಸೋಂಕಿತ ವೃದ್ಧ ಲಷ್ಕರ್ ಮೊಹಲ್ಲಾದ ಗರಡಿಕೇರಿ ನಿವಾಸಿಯಾಗಿದ್ದು, ಸ್ಮರಣ ಶಕ್ತಿ ಕಡಿಮೆಯಿತ್ತು ಎನ್ನಲಾಗಿದೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವಾ?

ಶನಿವಾರ ಬೆಳಗ್ಗೆ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಹೊರ ಬಂದು ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಸೋಂಕಿತನ ಪುತ್ರ ವಿಜಯ್​ ಎಂಬುವವರಿಗೆ ಸ್ನೇಹಿತರೊಬ್ಬರು ನಿಮ್ಮ ತಂದೆಯನ್ನು ಪಡುವಾರಹಳ್ಳಿಯಲ್ಲಿ ನೋಡಿದೆ ಎಂದಿದ್ದು, ಅನುಮಾನಗೊಂಡ ವಿಜಯ್​​ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತಂಕಕ್ಕೆ ಒಳಗಾದ ಪುತ್ರ ವಿಜಯ್​ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆ ವೈದ್ಯರು, ಭದ್ರತಾ ಕಾರ್ಯದಲ್ಲಿದ್ದ ಪೊಲೀಸರ ನಿರ್ಲಕ್ಷ್ಯದಿಂದ ನಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ವೃದ್ಧನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಹಾಗೂ ವೃದ್ಧನ ಬಗ್ಗೆ ಮಾಹಿತಿ ಸಿಕ್ಕಿದರೆ ಕಂಟ್ರೋಲ್‌ ರೂಂಗೆ ಕರೆ ಮಾಡುವಂತೆ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.