ETV Bharat / state

ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿದ ಕೋವಿಡ್ : ಮೃತರ ಸಂಖ್ಯೆಯಲ್ಲಿ ಹೆಚ್ಚಳ

author img

By

Published : Sep 1, 2020, 7:40 PM IST

ಮೈಸೂರು ಜಿಲ್ಲೆಯಲ್ಲಿ ಹಲವೆಡೆ ಆಂಟಿಜನ್ ರ‍್ಯಾಪಿಡ್ ಟೆಸ್ಟ್​ ಹೆಚ್ಚು ಮಾಡಿದ್ದರು, ಸಂಪರ್ಕಿತರ ಪತ್ತೆ ಹಚ್ಚುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸೋಂಕಿತರ ಮೇಲೆ ನಿಗಾ ಸಹ ಇಡುತ್ತಿಲ್ಲ. ಇದರ ಜೊತೆಗೆ ಕೋವಿಡ್ ಕೇಂದ್ರಗಳಲ್ಲೂ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

Covid lost control in Mysore district
ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿದ ಕೋವಿಡ್

ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ‌ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನರಲ್ಲಿ ಆತಂಕ ಸಹ ದ್ವಿಗುಣಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,949 ಆಗಿದ್ದು ಅದರಲ್ಲಿ 12,753 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇಲ್ಲಿಯವರೆಗೆ ಒಟ್ಟು 444 ಜನ ಮೃತಪಟ್ಟಿದ್ದಾರೆ. ಇದು ಕಳೆದ 3 ತಿಂಗಳಿನಿಂದ ನಡೆದ ಅಂಕಿ ಅಂಶವಾದರೆ, ಕಳೆದ 8 ದಿನಗಳ ಅಂಕಿ ಅಂಶ ಭಯ ತರುವಂತಿದೆ.

ಕಳೆದ 8 ದಿನಗಳಲ್ಲಿ 5,553 ಜನ ಕೋವಿಡ್ ಸೋಂಕಿಗೆ ತುತ್ತಾಗಿದ್ದರೆ ಕೇವಲ 8 ದಿನಗಳಲ್ಲಿ 124 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ‌ ಸರಾಸರಿ ಸಂಖ್ಯೆಯಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ ಮೈಸೂರಿನಲ್ಲೇ ಸಾವಿನ ಸಂಖ್ಯೆ ಹೆಚ್ಚಾಗಿದೆ.

ನಿಯಂತ್ರಣ ತಪ್ಪಲು ಕಾರಣವೇನು?

ಮೈಸೂರಿನಲ್ಲಿ ಆರಂಭದಲ್ಲಿ ಕೆಲ ದಿನಗಳ ಕಾಲ ಹತೋಟಿಯಲ್ಲಿದ್ದ ಕೊರೊನಾ, ಡಾ. ನಾಗೇಂದ್ರ ಆತ್ಮಹತ್ಯೆ ನಂತರ ನಡೆದ ವೈದ್ಯರ ಪ್ರತಿಭಟನೆ, ಅಧಿಕಾರಿಗಳು ಹಾಗೂ ಕೊರೊನಾ ವಾರಿಯರ್ಸ್ ನಡುವಿನ ಸಮನ್ವಯ ಕೊರತೆ, ಜನರ ನಿರ್ಲಕ್ಷ್ಯ, ಡಿ ಗ್ರೂಪ್ ನೌಕರರ ಕೊರತೆ, ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ನಿರಾಕರಣೆ ಸೇರಿದಂತೆ ಹಲವು ಪ್ರಮುಖ ಕಾರಣಗಳು ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಜನರಲ್ಲಿ ಸೋಂಕು ಇದ್ದರು ನಿರ್ಲಕ್ಷ್ಯ ಮನೋಭಾವ, ತಡವಾಗಿ ತಪಾಸಣೆಗೆ ಬರುವುದು, ಸಿರಿಯಸ್ ಆದಾಗ ಆಸ್ಪತ್ರೆಗೆ ಬರುವುದು ಹಾಗೂ ಇತರ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೋಂಕು ತಗುಲಿದ್ದರಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಹಲವೆಡೆ ಆಂಟಿಜನ್ ರ‍್ಯಾಪಿಡ್ ಟೆಸ್ಟ್​ ಹೆಚ್ಚು ಮಾಡಿದ್ದರು, ಸಂಪರ್ಕಿತರ ಪತ್ತೆ ಹಚ್ಚುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸೋಂಕಿತರ ಮೇಲೆ ನಿಗಾ ಸಹ ಇಡುತ್ತಿಲ್ಲ. ಇದರ ಜೊತೆಗೆ ಕೋವಿಡ್ ಕೇಂದ್ರಗಳಲ್ಲೂ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಇವೆಲ್ಲಂದರಿಂದ ಆ. 24 ರಂದು 202 ಸೋಂಕಿತ ಪ್ರಕರಣಗಳು ಕಂಡುಬಂದರೆ 25 ಸಾವಾಗಿದ್ದವು. ಇನ್ನು ಆ. 25 ರಂದು 1331 ಸೋಂಕಿತ ಪ್ರಕರಣಗಳು ಕಂಡುಬಂದರೆ 16 ಸಾವಾಗಿವೆ. ಆ. 26 ರಂದು 951 ಸೋಂಕಿತ ಪ್ರಕರಣಗಳು ದೃಢಪಟ್ಟರೆ ಅಂದು 20 ಜನರ ಸಾವು ಆಗಿವೆ. ಆ. 27 ರಂದು ಸೋಂಕಿತ ಪ್ರಕರಣಗಳು 859, ಸಾವು 18, ಆ. 28 ರಂದು ಸೋಂಕಿತ ಪ್ರಕರಣಗಳು 726 ಆದರೆ, ಸಾವು 17, ಆ. 29 ರಂದು ಸೋಂಕಿತ ಪ್ರಕರಣಗಳು 360 ಆದರೆ, ಅಂದು ಸಾವು 11. ಆ. 30 ಸೋಂಕಿತ ಪ್ರಕರಣಗಳು 743 ಆದರೆ, ಅಂದು ಸಾವು 11, ಆ. 31 ರಂದು ಸೋಂಕಿತ ಪ್ರಕರಣಗಳು 405 ಆದರೆ, ಅಂದು 6 ಜನರ ಸಾವಿದೆ. ಒಟ್ಟು ಕಳೆದ 8 ದಿನಗಳಲ್ಲಿ ಬರೋಬ್ಬರಿ 5,553 ಜನ ಸೋಂಕಿತರಾಗಿದ್ದು, 124 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳೊಂದಿಗೆ ಸಭೆ ಸಹ ನಡೆಸಿದ್ದಾರೆ. ಆದರೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಅನ್ನೋ ಮಾಹಿತಿ ಮಾತ್ರ ತಿಳಿದು ಬಂದಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 8 ದಿನಗಳಲ್ಲಿ ಕೋವಿಡ್ ನಿಯಂತ್ರಣ ತಪ್ಪಿದೆ ಎಂಬುದಕ್ಕೆ ದಿನದಿಂದ ದಿನಕ್ಕೆ ಏರುತ್ತಿರುವ ಸೋಂಕಿನ‌ ಪ್ರಮಾಣ ಹಾಗೂ ಸಾವಿನ ಪ್ರಮಾಣವೇ ಸಾಕ್ಷಿ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.