ETV Bharat / state

ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ: ವಿಡಿಯೋ

ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ, ಅವ್ಯವಸ್ಥೆ ವಿರುದ್ಧ ಸೋಂಕಿತರು ಕೊರೊನಾ ವಾರಿಯರ್​ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

covid centre
covid centre
author img

By

Published : Aug 8, 2020, 12:25 PM IST

ಮೈಸೂರು: ಕೋವಿಡ್ ಸೆಂಟರ್​ನ ಅವ್ಯವಸ್ಥೆ ವಿರುದ್ಧ ಸೋಂಕಿತರು ಕೊರೊನಾ ವಾರಿಯರ್​ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ನಡೆದಿದೆ.

ಕೋವಿಡ್ ಕೇರ್ ಸೆಂಟರ್​ನಲ್ಲಿ ಆಕ್ರೋಶ

ನಗರದ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಶೈಕ್ಷಣಿಕ ಭವನದ ಕೋವಿಡ್ ಕೇರ್ ಸೆಂಟರ್​ನಲ್ಲಿ ನೂರಾರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್​ನಲ್ಲಿ ಆಡಳಿತ ವ್ಯವಸ್ಥೆಯು ಸರಿಯಾದ ಶುಚಿತ್ವ ಕಾಪಾಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು. ಕಸ ವಿಲೇವಾರಿ ಮಾಡುತ್ತಿಲ್ಲ, ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿಲ್ಲ, ಇದರ ಜೊತೆಗೆ ಸೊಳ್ಳೆ, ನೊಣಗಳ ಕಾಟವಿದೆ, ಬೆಡ್ ಶೀಟ್​ಗಳನ್ನು ಬದಲಾಯಿಸುತ್ತಿಲ್ಲ‌, ಇದರಿಂದ ನಮಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ ಎಂದು ಆರೋಪಿಸಿದರು. ಕೋವಿಡ್ ಕೇರ್ ಸೆಂಟರ್​ನ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮನ್ನು ಮನೆಗೆ ಕಳುಹಿಸಿ, ನಾವೇ ಮನೆಯಲ್ಲೇ ಐಸೋಲೇಷನ್ ವ್ಯವಸ್ಥೆ ಮಾಡಿಕೊಂಡು ಅಲ್ಲೇ ಇರುತ್ತೇವೆ ಎಂದು ಒತ್ತಾಯಿಸಿದರು. ಸೋಂಕಿತರು ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ಸೇರಿಕೊಂಡು ಆಡಳಿತ ವ್ಯವಸ್ಥೆ ಹಾಗೂ ಕೊರೊನಾ ವಾರಿಯರ್​ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.