ETV Bharat / state

ಕೊರೊನಾ ಎಫೆಕ್ಟ್: ಗಜಪಡೆ ತಂಗಿರುವ ಸ್ಥಳದಲ್ಲಿ ಸ್ಯಾನಿಟೈಸೇಶನ್​ - ಆನೆ ದಸರಾ

ದಸರಾ ಹಬ್ಬದ ಅಂಗವಾಗಿ ಮೈಸೂರು ಅರಮನೆಗೆ ಗಜಪಡೆ ಆಗಮಿಸಿದ್ದು, ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆನೆಗಳು ತಂಗಿರುವ ಪ್ರದೇಶದಲ್ಲಿ ಸ್ಯಾನಿಟೈಸ್​ ಮಾಡಲಾಯಿತು.

Sanitisation
ಸ್ಯಾನಿಟೈಸ್​ ಮಾಡುತ್ತಿರುವ ಸಿಬ್ಬಂದಿ
author img

By

Published : Oct 3, 2020, 12:37 PM IST

ಮೈಸೂರು: ನಾಡಹಬ್ಬ ದಸರಾ ಯಶಸ್ವಿಗೊಳಿಸಲು ಆಗಮಿಸಿರುವ ಗಜಪಡೆಯ ಸುತ್ತಮುತ್ತಲಿನ ಜಾಗಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಕೊರೊನಾ ಹರಡಂದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.

ಸ್ಯಾನಿಟೈಸ್​ ಮಾಡುತ್ತಿರುವ ಸಿಬ್ಬಂದಿ

ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳಿರುವ ಸ್ಥಳದ ಸುತ್ತ ಸ್ಯಾನಿಟೈಸ್ ಮಾಡಿಸಲಾಗಿದ್ದು, ಮಾವುತರು ಹಾಗೂ ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಹೊರತುಪಡಿಸಿ ಇತರರಿಗೆ ಈ ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಗ್ಸಾಂಡರ್, ಈ ಬಾರಿ ಆನೆಗಳ ತೂಕವನ್ನು ಮಾಡಲಾಗಿಲ್ಲ. ಜಂಬೂ ಸವಾರಿ ಮುಗಿಸಿ ಹೋಗುವಾಗ ತೂಕ ಪರೀಕ್ಷೆ ಮಾಡಲಾಗುವುದು. ‌ಆನೆಗಳ ಸುತ್ತ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.