ETV Bharat / state

ಮೈಸೂರಿನ ಲಲಿತ್ ಮಹಲ್ ಪುನಶ್ಚೇತನ ಮಾಡಲು ಚಿಂತನೆ: ಸಚಿವ ಎಚ್ ಕೆ ಪಾಟೀಲ್ - ಲಲಿತ್ ಮಹಲ್ ಪ್ಯಾಲೆಸ್​

ಲಲಿತ ಮಹಲ್​ ಸಂಪೂರ್ಣ ಪುನಶ್ಚೇತನ ಮಾಡಲು ಕೋಟಿಗಟ್ಟಲೆ ಹಣ ಬೇಕು ಎಂದು ಸಚಿವ ಹೆಚ್​ ಕೆ ಪಾಟೀಲ್​ ಮಾಹಿತಿ ನೀಡಿದ್ದಾರೆ.

Lalitha Mahal and Minister HK Patil
ಲಲಿತ ಮಹಲ್​ ಹಾಗೂ ಸಚಿವ ಎಚ್ ಕೆ ಪಾಟೀಲ್
author img

By

Published : Jul 24, 2023, 6:25 PM IST

ಮೈಸೂರು: ಲಲಿತ್ ಮಹಲ್ ಪ್ಯಾಲೇಸ್​ಗೆ ವಯಸ್ಸಾಗಿದೆ. ಇದರಿಂದ ಸತ್ವ ಕಳೆದುಕೊಂಡಿದೆ. ಪಾರಂಪರಿಕ ಲಲಿತ್ ಮಹಲ್ ಪ್ಯಾಲೇಸ್ ಪುನಶ್ಚೇತನ ಆಗಬೇಕು. ಇದನ್ನು ಬೇರೆ ಕಟ್ಟಡದ ರೀತಿ ಪುನಶ್ಚೇತನ ಮಾಡಲು ಆಗುವುದಿಲ್ಲ. ಸಂಪೂರ್ಣ ಪುನಶ್ಚೇತನ ಮಾಡಲು ಕೋಟಿಗಟ್ಟಲೇ ಹಣ ಬೇಕು. ಒಂದು ರೂಂ ಫರ್ನಿಷ್ ಮಾಡಲು ಲಕ್ಷಗಟ್ಟಲೆ ಹಣ ಬೇಕು. ಈ ಎಲ್ಲಾ ಹಿನ್ನೆಲೆಯಲ್ಲಿ ಲಲಿತ್ ಮಹಲ್ ಪುನಶ್ಚೇತನ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಇಂದು ಅರಮನೆ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಚಿವರು, ಪಾರಂಪರಿಕ ಸ್ಟಾರ್ ಕೆಟಗರಿಯ ಲಲಿತ್ ಮಹಲ್ ಹೋಟೆಲ್​ಗೆ 30 ವರ್ಷದ ಹಿಂದೆ ಹೋಗಿದ್ದೆ. ಆದರೆ 30 ವರ್ಷಗಳ ನಂತರ ನಿನ್ನೆ ಲಲಿತ್ ಮಹಲ್​ಗೆ ಭೇಟಿ ನೀಡಿದ್ದ. ಆಗಿನ ಲಲಿತ್ ಮಹಲ್ ಬೇರೆ, ಈಗಿನ ಲಲಿತ್ ಮಹಲ್ ಬೇರೆ. ಈಗಿನ ಲಲಿತ್ ಮಹಲ್​ಗೆ ವಯಸ್ಸಾಗಿದೆ. ಆದ್ದರಿಂದ ತನ್ನ ಸತ್ವವನ್ನು ಕಳೆದುಕೊಂಡಿದ್ದು, ಈಗ ಇದನ್ನು ಪುನಶ್ಚೇತನ ಮಾಡಬೇಕು ಎಂದರು.

ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಮುಖ್ಯ ವ್ಯಕ್ತಿಗಳು ಬೇರೆ ಖಾಸಗಿ ಹೋಟೆಲ್​ಗೆ ಹೋಗದಿರಲು ಕಾರಣ, ಲಲಿತ್ ಮಹಲ್​ನಲ್ಲಿ ಕ್ವಾಲಿಟಿ ಇಲ್ಲ. ಹಾಗಾಗಿ ಸಹಜವಾಗಿ ಬೇರೆ ಕಡೆ ಹೋಗುತ್ತಾರೆ ಎಂದು ಸಚಿವರು ಲಲಿತ್ ಮಹಲ್ ಪಾರಂಪರಿಕ ಹೋಟೆಲ್​ನ ದುಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು‌.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಚಿಂತನೆ ಇಲ್ಲ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಚಿಂತನೆ ಇತ್ತು. ಆದರೆ ಆ ಚಿಂತನೆಯನ್ನು ಕೈಬಿಡಲಾಗಿದೆ. ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳಿಗೂ ಒಂದೇ ಟಿಕೆಟ್ ನೀಡುವ ಚಿಂತನೆ ಇದ್ದು, ಒಂದು ಟಿಕೆಟ್ ಪಡೆದು ಪ್ರವಾಸಿಗರು ಸಲೀಸಾಗಿ ಆ ಟಿಕೆಟ್​ನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಎಲ್ಲಾ ಪ್ರವಾಸಿ ತಾಣಗಳಿಗೂ ಸಲೀಸಾಗಿ ಹೋಗಬಹುದು. ಆ ದೃಷ್ಟಿಯಿಂದ ಒನ್ ಟಿಕೆಟ್ ಸೌಲಭ್ಯವನ್ನು ಜಾರಿ ಮಾಡುವ ಚಿಂತನೆ ಇದೆ ಎಂದು ಸಚಿವರು ವಿವರಿಸಿದರು.

ಇದರ ಜೊತೆಗೆ ಮೈಸೂರಿನ ವಸ್ತು ಪ್ರದರ್ಶನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ವದೇಶಿ ದರ್ಶನ್ ಯೋಜನೆಯಡಿ 80 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಂಸದ ಪ್ರತಾಪ್ ಸಿಂಹ ಸಭೆ ಮಾಡಿರುವ ವಿಚಾರವೂ ನನಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಕಳೆದ 5 ವರ್ಷಗಳಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ನಯಾ ಪೈಸೆ ಹಣ ನೀಡಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಆರೋಪಿಸಿದರು.

10 ವರ್ಷಗಳ ನಂತರ ಅರಮನೆ ಟ್ರೆಷರಿ ಓಪನ್: 10 ವರ್ಷಗಳ ಬಳಿಕ ಮೈಸೂರು ಅರಮನೆಯ ಒಳಗಿರುವ ಪಾರಂಪರಿಕ ಟ್ರೆಷರಿಯನ್ನು ಸಚಿವರು ತೆರೆಸಿ ಪರಿಶೀಲನೆ ನಡೆಸಿದರು. ಇಲ್ಲಿ ಪುರಾತನ 369 ವಸ್ತುಗಳಿದ್ದು, ಅದರಲ್ಲಿ ಪುರಾತನ ನಾಣ್ಯಗಳು ಸೇರಿವೆ. ಈ ಪ್ರಾಚೀನ ವಸ್ತು ಸಂಗ್ರಹಾಲಯವನ್ನು 2014 ರಲ್ಲಿ ಮುಚ್ಚಲಾಗಿತ್ತು. ಈಗ ಸಚಿವರು ಪುರಾತತ್ವ ಇಲಾಖೆಯ ಅಧೀನದಲ್ಲಿ ಇರುವ ಈ ಸಂಗ್ರಹಾಲಯವನ್ನು ತೆರೆಸಿ, ಮುಂದಿನ ದಿನಗಳಲ್ಲಿ ಅಧ್ಯಯನಕ್ಕೆ, ಮಾಹಿತಿ ಸಂಗ್ರಹಕ್ಕೆ ಹಾಗೂ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಲು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಈಗ ಇರುವ ಹಳೆಯ ಪಾರಂಪರಿಕ ಜಿಲ್ಲಾಧಿಕಾರಿ ಕಚೇರಿಯನ್ನು ಮ್ಯೂಸಿಯಂ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಬಿಜೆಪಿಯ 14 ಕಾರ್ಯಕ್ರಮ ಕೈಬಿಟ್ಟ ಕಾಂಗ್ರೆಸ್​ ಸರ್ಕಾರ .. ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.