ಮೈಸೂರು : ಐದು ತಿಂಗಳ ಹಿಂದೆ ಮದುವೆಯಾಗಿದ್ದ ಕಾನ್ಸ್ಟೇಬಲ್ ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚೈತ್ರ (25) ನೇಣಿಗೆ ಶರಣಾಗಿರುವ ಮಹಿಳೆ. ಈಕೆ ಕಳೆದ 5 ತಿಂಗಳ ಹಿಂದೆ ಕಾನ್ಸ್ಟೇಬಲ್ ಮೋಹನ್ ಆರಾಧ್ಯ ಎಂಬುವರನ್ನು ಚೈತ್ರ ಮದುವೆಯಾಗಿದ್ದಳು. ಮೂರು ತಿಂಗಳ ಗರ್ಭಿಣಿಯಾಗಿದ್ದ ಈಕೆ, ಹೆಬ್ಬಾಳದ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಓದಿ: ಒಲ್ಲದ ಮನಸ್ಸಿನಿಂದ ಒಂದೇ ನಿಮಿಷದಲ್ಲಿ ನಾಮಪತ್ರ ಸಲ್ಲಿಸಿದ ಕೆ.ಸಿ ಕೊಂಡಯ್ಯ
ಸಾವಿಗೆ ಕಾರಣ ನಿಗೂಢ:
ನನ್ನ ಮಗಳನ್ನು ಅಳಿಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಮಗಳಿಗೆ ಹೊಟ್ಟೆನೋವು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಳ ತಂದೆ ದೂರು ನೀಡಿದ್ದಾರೆ. ಡೆತ್ನೋಟ್ ಸಿಕ್ಕಿಲ್ಲ. ತನಿಖೆ ಮುಂದುವರೆಸಿದ್ದೇವೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದರು.