ETV Bharat / state

ಪ್ರಧಾನಿ ಮೋದಿ ಓಡಾಡುವ ಫ್ಲೈಟ್ ಎಂಥದ್ದು?: ಸಿಎಂ ಸಿದ್ದರಾಮಯ್ಯ - ​ ETV Bharat Karnataka

ಸಚಿವ ಜಮೀರ್ ಅವರೊಂದಿಗೆ ಖಾಸಗಿ ಜೆಟ್​ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೋ ವಿಚಾರ ಹಾಗು ಕೋವಿಡ್ ಕುರಿತ ಪ್ರಶ್ನೆಗಳಿಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Dec 22, 2023, 3:28 PM IST

Updated : Dec 22, 2023, 7:58 PM IST

'ಮೋದಿ ಓಡಾಡುವ ಫ್ಲೈಟ್ ಎಂಥದ್ದು?'

ಮೈಸೂರು: ಬರ ವಿಷಯವಾಗಿ ಕೇಂದ್ರದ ನಾಯಕರನ್ನು ಭೇಟಿಯಾಗಿ ವಾಪಸ್ ಬೆಂಗಳೂರಿಗೆ ಸಚಿವ ಜಮೀರ್ ಖಾನ್ ಜೊತೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ''ಪ್ರಧಾನಿ ನರೇಂದ್ರ ಮೋದಿಯವರು ಯಾವ ಫ್ಲೈಟ್​ನಲ್ಲಿ ಓಡಾಡುತ್ತಾರೆ? ಯಾವುದರಲ್ಲಿ ತಿರುಗಾಡುತ್ತಾರೆ ಎಂದು ನೀವೇ ಹೇಳಿ. ಮೋದಿಯವರು ಯಾವ ವಿಮಾನದಲ್ಲಿ ಓಡಾಡುತ್ತಾರೆ? ಫ್ಲೈಟ್​ನಲ್ಲಿ ಒಬ್ಬರೇ ಓಡಾಡುತ್ತಾರಲ್ಲವೇ? ಯಾಕೆ ಎಂದು ಬಿಜೆಪಿಯವರಿಗೆ ಕೇಳಿ'' ಎಂದರು.

ಇಂದಿನಿಂದ ಎರಡು ದಿನಗಳ ಮೈಸೂರು ಜಿಲ್ಲಾ ಪ್ರವಾಸಕ್ಕಾಗಿ ಆಗಮಿಸಿದ ಸಿಎಂ, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಇದೇ ವೇಳೆ ಕೋವಿಡ್ ನಿರ್ಬಂಧಗಳ ವಿಚಾರವಾಗಿ ಮಾತನಾಡಿದ ಸಿಎಂ, ಪ್ರಕರಣಗಳ ಹೆಚ್ಚಳದಿಂದ ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಪರಿಸ್ಥಿತಿ ಸದ್ಯಕ್ಕಿಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ ನಿನ್ನೆ ಆರು ಜನರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಅವರು ಬೇರೆ ಬೇರೆ ರೋಗಗಳ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಕಾಣಿಸಿಕೊಂಡಿದೆ. ಅದಕ್ಕೆ ಯಾವುದೇ ರೀತಿಯ ಭಯ ಬೇಡ. ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ, ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಇನ್ನು, ಸಂಸತ್ ಸದಸ್ಯರನ್ನು ಕಲಾಪದಿಂದ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಸರ್ವಾಧಿಕಾರದ ಪರಮಾವಧಿ. ಇವರಿಗೆ ಪ್ರಜಾಪ್ರಭುತ್ವದ ಯಾವ ಆಶಯಗಳ ಮೇಲೂ ನಂಬಿಕೆ ಇಲ್ಲ. ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಎಂದರೆ ಏನರ್ಥ?. ಜನ ಇವರ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲವೇ ಎಂಬವ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರು ಸರಿಯಾದ ತೀರ್ಮಾನ ಮಾಡುತ್ತಾರೆ ಎಂದು ಆಕ್ರೋಶಗೊಂಡರು.

ನವದೆಹಲಿಯಲ್ಲಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಬರ ಪರಿಹಾರ ಸೇರಿದಂತೆ ರಾಜ್ಯದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅವುಗಳನ್ನು ಕೇಂದ್ರ ಸರ್ಕಾರ ಈಡೇರಿಸುವ ಭರವಸೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದು, ಬರ ಪರಿಸ್ಥಿತಿಯ ಬಗ್ಗೆ ನಾಳೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಜೊತೆಗೆ ಮಹಾದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳು ಹಾಗೂ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150 ದಿನಗಳಿಗೆ ವಿಸ್ತರಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲು ಮನವಿ ಮಾಡಲಾಗಿದೆ. ಪ್ರಧಾನಿ ಮೋದಿಯವರು ಕರ್ನಾಟಕ ಬರ ಪರಿಸ್ಥಿತಿ ಹಾಗೂ ಮೇಲಿನ ಬೇಡಿಕೆಗಳ ಬಗ್ಗೆ ಸಮಾಧಾನಚಿತ್ತರಾಗಿ ಆಲಿಸಿ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಯಶವಂತಪುರ ಘಟನೆ ಗಮನಕ್ಕೆ ಬಂದಿಲ್ಲ-ಸಚಿವ ಮಹಾದೇವಪ್ಪ: ಯಶವಂತಪುರದಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಶಾಲೆ ಮತ್ತು ಹಾಸ್ಟೆಲ್ ಹಂತದಲ್ಲಿ ಏನಾಗಿದೆ ಎಂದು ಗೊತ್ತಾಗಲ್ಲ. ಅದಕ್ಕಾಗಿ ಇದನ್ನೆಲ್ಲವನ್ನೂ ಗಮನಿಸಲು ವಿಚಕ್ಷಣಾ ದಳ ರಚಿಸಲು ಸೂಚಿಸಿದ್ದೇನೆ. ಅಲ್ಲೊಂದು ಇಲ್ಲೊಂದು ಘಟನೆಗಳು ನಡೆದರೆ ಎಲ್ಲವನ್ನೂ ಸಾಮಾನ್ಯವಾಗಿ ನೋಡುವುದು ಬೇಡ. ನಾವು ಯಾರನ್ನೂ ರಕ್ಷಣೆ ಮಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್ ಸಿ.ಮಹಾದೇವಪ್ಪ ಹೇಳಿದರು.

ಇದನ್ನೂ ಓದಿ: ಕ್ರಿಸ್​ಮಸ್​, ನ್ಯೂ ಇಯರ್​ ಆಚರಣೆ ಹಿನ್ನೆಲೆ: ಮುಂಜಾಗ್ರತಾ ಕ್ರಮಕ್ಕೆ ಜಿ.ಪರಮೇಶ್ವರ್​ ಸೂಚನೆ

Last Updated : Dec 22, 2023, 7:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.