ETV Bharat / state

ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಕ್ರಿಸ್​ಮಸ್ ಸಂಭ್ರಮ

ಇಂದು ಬೆಳಗ್ಗೆ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಕ್ರಿಸ್​ಮಸ್ ಹಿನ್ನೆಲೆ ಸಾವಿರಾರು ಮಂದಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

christmas
ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಕ್ರಿಸ್​ಮಸ್ ಸಂಭ್ರಮ
author img

By ETV Bharat Karnataka Team

Published : Dec 25, 2023, 1:42 PM IST

ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಕ್ರಿಸ್​ಮಸ್ ಸಂಭ್ರಮ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಪುರಾತನ ಮತ್ತು ಪಾರಂಪರಿಕ ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಕ್ರಿಸ್​ಮಸ್​ ಸಂಭ್ರಮ ಮನೆ ಮಾಡಿದ್ದು, ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮಾಡಲಾಯಿತು. ಮೈಸೂರಿನ ಹೆಸರಾಂತ ಸೆಂಟ್ ಫಿಲೋಮಿನಾ ಚರ್ಚ್​ನಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಕ್ರಿಸ್​ಮಸ್​ ಸಂಭ್ರಮ ಪ್ರಾರಂಭವಾಯಿತು. ಶಾಂತಿದೂತ ಯೇಸುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಜರುಗಿದ್ದು, ಜನರು ಕ್ರಿಸ್​ಮಸ್ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಕ್ಯಾಥೋಲಿಕ್​ನ ಪ್ರಧಾನ ಚರ್ಚ್ ಆದ ಸೆಂಟ್ ಫಿಲೋಮಿನಾದಲ್ಲಿ ಮೈಸೂರಿನ ಧರ್ಮ ಕ್ಷೇತ್ರದ ಆಡಳಿತಾಧಿಕಾರಿ ಬರ್ನಾಡ್ ಮೋರಿಸ್ ನೇತೃತ್ವದಲ್ಲಿ ಪೂಜೆ ಪ್ರಾರಂಭಿಸಲಾಯಿತು. ಬಳಿಕ, ಕ್ರಿಸ್​ಮಸ್ ಜಾಗರಣೆ, ಬಲಿ ಪೂಜೆ ಸಲ್ಲಿಕೆ, ರಾತ್ರಿ 12 ಗಂಟೆಗೆ ಬಾಲಯೇಸು ಮೆರವಣಿಗೆ ಮೂಲಕ ಗೋದಳಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಯೇಸು ಕ್ರಿಸ್ತನ ಜನನದ ಬಗ್ಗೆ ವಿವರಿಸುವ ಬೊಂಬೆಗಳನ್ನು ಪ್ರದರ್ಶನ ಮಾಡಲಾಯಿತು. ನಂತರ ಕರೋಲ್ ಕ್ರೈಸ್ತ ಗೀತೆಯನ್ನು ಹಾಡುತ್ತ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅಷ್ಟೇ ಅಲ್ಲದೆ, ಸೆಂಟ್ ಫಿಲೋಮಿನಾ ಚರ್ಚ್​ಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಹೀಗಾಗಿ ನಗರದಲ್ಲೀಗ ಕ್ರಿಸ್​​ಮಸ್​​​​​​​​ನ ಆಚರಣೆ ಜೋರಾಗಿ ಸಾಗಿದೆ. ದೀಪಗಳ ಅಲಂಕಾರ ಕಣ್ತುಂಬಿಕೊಳ್ಳಲು ಜನ ಚರ್ಚೆಗಳತ್ತ ಧಾವಿಸುತ್ತಿದ್ದಾರೆ.

ಇದನ್ನೂ ಓದಿ : ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ : ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ಕ್ರಿಸ್​ಮಸ್ ಹಿನ್ನೆಲೆ : ಪ್ರಾಚೀನ ಕ್ರಿಶ್ಚಿಯನ್ ದಂತಕಥೆ ಪ್ರಕಾರ, ಡಿಸೆಂಬರ್ 25 ರಂದು ಏಸು ಜನ್ಮ ದಿನವಾಗಿದೆ. ಕ್ರಿಸ್​ಮಸ್ ಎಂಬುದು ಹಳೆಯ ಇಂಗ್ಲಿಷ್​ ಪದವಾಗಿದೆ. ಇದನ್ನು ಕ್ರಿಸ್ತನ ಮಾಸ್ ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ, ಮೊದಲ ದಾಖಲಿತ ಕ್ರಿಸ್​ಮಸ್ ಆಚರಣೆ ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ಆಳ್ವಿಕೆಯಲ್ಲಿ ಮಾಡಲಾಯಿತು, ಕ್ರಿ.ಶ 336 ಕ್ಕೂ ಹಿಂದಿನಿಂದ ಈ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಕ್ರಿಸ್‌ಮಸ್ ಆಚರಣೆಗಳು ಪ್ರಪಂಚದಾದ್ಯಂತ ವಿವಿಧ ಪದ್ಧತಿಗಳನ್ನು ಒಳಗೊಂಡಿವೆ. ಚರ್ಚ್ ಸೇವೆಗಳಿಗೆ ಹಾಜರಾಗುವುದರಿಂದ ಹಿಡಿದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಕ್ರಿಸ್‌ಮಸ್ ಅನ್ನು ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತಿದೆ. ಇಸ್ರೇಲ್‌ನ ಬೆಥ್‌ಲೆಹೆಮ್‌ನಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಒಂದೇ ರೀತಿಯ ಸಂಪ್ರದಾಯಗಳು ಆಚರಣೆಯಲ್ಲಿವೆ. ರಷ್ಯಾದಲ್ಲಿ 39 ದಿನದ ಉಪವಾಸದ ನಂತರ ಚಳಿಗಾಲದಲ್ಲಿ ಆಚರಿಸುವ ಹಬ್ಬವೇ ಈ ಕ್ರಿಸ್‌ಮಸ್​ ಆಗಿದೆ. ಗ್ರೀಸ್, ಜೂಲಿಯನ್ ಕ್ಯಾಲೆಂಡರ್ ಅನ್ನು ಅನುಸರಿಸಿ ಜನವರಿ 7 ರಂದು ಈ ಹಬ್ಬವನ್ನು ಆಚರಿಸುತ್ತದೆ. ಈಜಿಪ್ಟಿನ ಕ್ರಿಶ್ಚಿಯನ್ನರು 43 ದಿನಗಳ ಉಪವಾಸವನ್ನು ಆಚರಿಸುತ್ತಾರೆ.

ಇದನ್ನೂ ಓದಿ : ಮಲೆನಾಡಲ್ಲಿ ಸಂಭ್ರಮದ ಕ್ರಿಸ್​ಮಸ್ : ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.