ETV Bharat / state

ಚೀನಾ ಕಚ್ಚಾ ವಸ್ತುಗಳ ಮೂಲಕ ಸೋಂಕು ಹರಡಿರುವ ಆರೋಪ - through raw materials through virus

ಜುಬಿಲಿಯೆಂಟ್​​ ಜನರಿಕ್ ಫಾರ್ಮಾಸುಟಿಕಲ್​ ಕಂಪನಿಗೆ ಬರುವ ಕಚ್ಚಾ ವಸ್ತುಗಳ ಮೂಲಕ ಸೋಂಕು ಬಂದಿದೆ ಎಂದು ಶಾಸಕ ಹರ್ಷವರ್ಧನ್ ಆರೋಪಿಸಿದರು.

China accused of spreading contamination through raw materials
ಶಾಸಕ ಹರ್ಷವರ್ಧನ್
author img

By

Published : Apr 8, 2020, 7:54 PM IST

Updated : Apr 8, 2020, 9:39 PM IST

ಮೈಸೂರು: ಜುಬಿಲಿಯೆಂಟ್​ ಜನರಿಕ್ ಫಾರ್ಮಾಸುಟಿಕಲ್​ ಕಂಪನಿಗೆ ಚೀನಾದಿಂದ ಕಚ್ಚಾ ವಸ್ತುಗಳು ಬರುತ್ತಿವೆ. ಇದರಿಂದ ಕೊರೊನಾ ಸೋಂಕು ಭಾರತಕ್ಕೆ ಬಂದಿದೆ ಎಂದು ನಂಜನಗೂಡಿನ ಶಾಸಕ ಹರ್ಷವರ್ಧನ್ ಆರೋಪ ಮಾಡಿದ್ದಾರೆ.

ಸಚಿವ ಶ್ರೀರಾಮುಲು ಜೊತೆ ಇಂದು ಸಭೆಯಲ್ಲಿ ಚರ್ಚಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜುಬಿಲಿಯೆಂಟ್​ ಕಂಪನಿಗೆ ಚೀನಾದಿಂದ ಕಚ್ಚಾ ವಸ್ತುಗಳು ಬರುತ್ತಿವೆ ಎಂದು ಅಲ್ಲಿಯ ನೌಕರನೇ ದೂರವಾಣಿಯಲ್ಲಿ ತಿಳಿಸಿದ್ದಾನೆ ಎಂದರು.

ಈ ಕುರಿತು ನನ್ನ ಮೇಲೆ ಹಲವು ರೀತಿಯ ಒತ್ತಡಗಳು ಬರುತ್ತಿವೆ. ಆದರೆ, ನನಗೆ ನನ್ನ ಕ್ಷೇತ್ರದ ಜನ ಮುಖ್ಯ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜುಬಿಲಿಯೆಂಟ್​ ಕಾರ್ಖಾನೆಯ ಮೇಲೆ ನಾನು ಮಾಡಿರುವ ಆರೋಪ ಸುಳ್ಳಲ್ಲ. ಈ ಅನಾಹುತಕ್ಕೆ ಯಾರು ಕಾರಣ ಅವರ ತಲೆದಂಡ ಆಗಲೇಬೇಕು. ನನ್ನ ಮೇಲೆ ಯಾವುದೇ ಒತ್ತಡ ಬಂದರು ನಾನು ಬಗ್ಗುವುದಿಲ್ಲ ಎಂದರು.

ಈ ಕಂಪನಿಯ ಉತ್ಪಾದನೆ ಸರಿಯಿಲ್ಲ ಎಂದು ಅಮೆರಿಕವೇ ನೋಟಿಸ್ ಕೊಟ್ಟಿದೆ. ಈ ಕಂಪನಿಯ ಬಗ್ಗೆ ಗೂಗಲ್​ನಲ್ಲಿರುವ ವೆಬ್​ಸೈಟ್​ನಲ್ಲಿ ತಿಳಿಯಬಹುದು ಎಂದರು.

Last Updated : Apr 8, 2020, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.