ETV Bharat / state

ನಂಜನಗೂಡು ಪೊಲೀಸರಿಂದ ಖತರ್ನಾಕ್ ಸರಗಳ್ಳನ ಬಂಧನ - ಸರಗಳ್ಳನ ಬಂಧನ

ಖತರ್ನಾಕ್ ಸರಗಳ್ಳನೋರ್ವನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

chain snatcher arrested in Nanjanagudu
ನಂಜನಗೂಡು ಪೊಲೀಸರಿಂದ ಸರಗಳ್ಳನ ಬಂಧನ
author img

By

Published : Apr 19, 2021, 1:29 PM IST

ಮೈಸೂರು : ದೇವಾಲಯಗಳ ಬಳಿ ಮತ್ತು ಬಸ್ ಹತ್ತುವಾಗ ಮಹಿಳೆಯರ ಸರ ಎಗರಿಸುತ್ತಿದ್ದ ಕುಖ್ಯಾತ ಸರಗಳ್ಳನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಪ್ಪ ಬಂಧಿತ ಸರಗಳ್ಳ. ಈತ ನಂಜನಗೂಡು ದೇವಾಲಯಕ್ಕೆ ಬರುವ ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವಾಗ ಹಾಗೂ ಬಸ್ ಹತ್ತುವಾಗ ಹೊಂಚು ಹಾಕಿ ಸರಗಳ್ಳತನ ಮಾಡುತ್ತಿದ್ದ. ಬಸ್​ ಹತ್ತುವಾಗ ಜನ ಜಂಗುಲಿ ನಡುವೆ ಖದೀಮ ತನ್ನ ಕೈಚಳಕ ತೋರಿಸುತ್ತಿದ್ದ. ಹೀಗೆ ಕದ್ದ ಸರಗಳನ್ನು ಗಿರವಿ ಅಂಗಡಿಯಲ್ಲಿ ಇಡಲು ಬಂದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೋಲಾರದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆ ಮೇಲೆ ಹಲ್ಲೆ : ಚಿನ್ನದ ಸರ ಕದ್ದು ದುಷ್ಕರ್ಮಿ ಪರಾರಿ

ಬಂಧಿತನಿಂದ 19 ಗ್ರಾಂ. ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ನಂಜನಗೂಡು ಡಿವೈಎಸ್ಪಿ ಗೋವಿಂದ್ ರಾಜ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.