ETV Bharat / state

ಬಿಎಸ್​ವೈ ರಾಜೀನಾಮೆ ನೀಡ್ತಾರೆ ಅಂತಾ ಕನಸು ಕಾಣಬೇಡಿ: ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು - ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು

ಡಿಸೆಂಬರ್ 09ರಂದು ಮುಖ್ಯಮಂತ್ರಿ ಪದವಿಗೆ ಬಿಎಸ್​ವೈ ರಾಜೀನಾಮೆ ನೀಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
ಸಿದ್ದರಾಮಯ್ಯಗೆ ಸಿ.ಟಿ ರವಿ ತಿರುಗೇಟು
author img

By

Published : Dec 7, 2019, 4:49 AM IST

ಮೈಸೂರು: ಡಿಸೆಂಬರ್ 09ರಂದು ಮುಖ್ಯಮಂತ್ರಿ ಪದವಿಗೆ ಬಿಎಸ್​ವೈ ರಾಜೀನಾಮೆ ನೀಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಈ ತರಹದ ಕನಸು ಬೀಳಬಾರದು. ಇದು ಕೈಗೆಟುಕುವ ನರಿಯ ದ್ರಾಕ್ಷಿ ತರಹ ಆಗಿಬಿಡುತ್ತೇ ಎಂದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ 26ನೇ ಸಂಗೀತ ಸಮ್ಮೇಳನದ ಸಮಾರೋಪದ ನಂತರ ಮಾತನಾಡಿದ ಅವರು, ಚುನಾವಣೆ ಮುನ್ನವೇ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳಿಗೆ ಈ ರೀತಿ ಕನಸು ಬೀಳೋದಕ್ಕೆ ಆರಂಭವಾಗಿದೆ. ಫಲಿತಾಂಶದ ನಂತರ ಖೇಲ್ ಖತಂ ನಾಟಕ ಬಂದ್ ಆಗಲಿದ್ದು, ಬಿಜೆಪಿ ಸರ್ಕಾರ 3 ವರ್ಷ ಪೂರೈಸುತ್ತದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಜನ ತಿರಸ್ಕಾರ ಮಾಡಿದ್ದಾರೆ. ಸ್ಥಿರವಾದ ಒಳ್ಳೆಯ ಸರ್ಕಾರದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.

ಸಂಗೀತ ಸಮ್ಮೇಳನದ ಸಮಾರೋಪ ಕಾರ್ಯಕ್ರಮ

ಉಪಚುನಾವಣೆಯಲ್ಲಿ ಗೆದ್ದವರಿಗೆ ಅನಿವಾರ್ಯವಾಗಿ ಮಂತ್ರಿ ಮಾಡಬೇಕಿದೆ. ಸಿದ್ದಾಂತ ಧಾರಣೆ ಮಾಡಬೇಕು. ಕೇವಲ ಆಡಳಿತ ಹಾಗೂ ರಾಜಕೀಯ ನಡೆಸಲು ನಾವು ಬಂದಿಲ್ಲ ಎಂದರು. ರಾಜಕೀಯ ಹಾಗೂ ಆಡಳಿತದ ಜೊತೆಗೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ ಎಂದರು.

ಫಲಿತಾಂಶ ನಂತರ ಸಂಪುಟ ವಿಸ್ತರಣೆ ನಡೆಯಲಿದೆ. ಯಾರಿಗೆ ಯಾವ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದ್ದು, 13 ಮಂದಿ ಮಂತ್ರಿ ಆಗ್ತಾರೆ ಎಂದು ತಿಳಿಸಿದರು.

Intro:ಸಿ.ಟಿ.ರವಿBody:ಮೈಸೂರು:ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಿ.೯ರಂದು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಾರೆ ಎಂಬುವುದು ಸಿದ್ದರಾಮಯ್ಯ ಅಂತವರಿಗೆ ಈತರಹದ ಕನಸು ಬೀಳಬಾರದು, ಕೈಗೆಟುವ ನರಿಯ ದ್ರಾಕ್ಷಿತರಹ ಆಗಿಬಿಡುತ್ತೇ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ೨೬ನೇ ಸಂಗೀತ ಸಮ್ಮೇಳನದ ಸಮಾರೋಪದ ನಂತರ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಮುನ್ನವೇ ಜಾ.ದಳ-ಕಾಂಗ್ರೆಸ್ ತಿರುಕು ಕನಸು ಬೀಳಕ್ಕೆ ಅರಂಭವಾಗಿತ್ತು. ಆದರೆ ಏನಾಯಿತು? ಚುನಾವಣೆ ಫಲಿತಾಂಶದ ನಂತರ ಖೇಲ್ ಖತಂ ನಾಟಕ ಬಂದ್ ಆಗಲಿದೆ. ಬಿಜೆಪಿ ಸರ್ಕಾರ ೩ ವರ್ಷ ಪೂರೈಸುತ್ತೆ ಎಂದರು.
ಸ್ಥಿರವಾದ ಸರ್ಕಾರ ಇಲ್ಲದೇ ಇದ್ದರೆ, ಅಸ್ಥಿರ ಸರ್ಕಾರ ದೂರದೃಷ್ಟಿ ಗುರಿಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಸ್ಥಿರವಾದ ಸರ್ಕಾರ ಕೊಡಲು ಬಿಜೆಪಿಗೆ ಸಾಧ್ಯ. ಪರಸ್ವರ ವಿಶ್ವಾಸ ಇರದ ಮೈತ್ರಿಯ ೧೪ ತಿಂಗಳು ನೋಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಜನ ತಿರಸ್ಕಾರ ಮಾಡಿದ್ದಾರೆ.ಸ್ಥಿರವಾದ ಒಳ್ಳೆಯ ಸರ್ಕಾರದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.
ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಅನಿವಾರ್ಯವಾಗಿ ಮಂತ್ರಿ ಮಾಡ ಬೇಕಿದೆ. ಸಿದ್ದಾಂತ ಧಾರಣೆ ಮಾಡಬೇಕು. ಕೇವಲ ಆಡಳಿತ ಹಾಗೂ ರಾಜಕೀಯ ನಡೆಸಲು ನಾವು ಬಂದಿಲ್ಲ. ರಾಜಕೀಯ-ಆಡಳಿತ ಜೊತೆಗೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದಿರುವುದು.ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ. ಅವರನ್ನು ನಮ್ಮ ವ್ಯವಸ್ಥೆಗೆ ಜೋಡಿಸಬೇಕಿದೆ.ಫಲಿತಾಂಶ ನಂತರ ಸಂಪುಟ ವಿಸ್ತರಣೆ ನಡೆಯಲಿದೆ. ಯಾರಿಗೆ ಯಾವ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಜಾ.ದಳ ಹಾಗೂ ಕಾಂಗ್ರೆಸ್ ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರನ್ನು ಸೆಳೆಯುವ ಪ್ರಯತ್ನ ಮಾಡುವುದಿಲ್ಲ. ಅವರಾಗಿಯೇ ಬಂದರೆ, ಅದು ಅವರಿಚ್ಚೆ.ಸ್ಥಿಂತ್ಯತರ ಹಾಗೂ ಧ್ರುವಕರಣ ದೇಶದ ರಾಜಕೀಯ ಇತಿಹಾಸದಲ್ಲಿ ಅದು ಹೊಸದೆನಲ್ಲ ಭವಿಷ್ಯದಲ್ಲೂ ಹೊಸದಲ್ಲ. ಯಾರಿಗೂ ಸೆಳೆಯುವ ಪ್ರಯತ್ನ ಮಾಡುವುದಿಲ್ಲ. ಅದರ ಅನಿವಾರ್ಯತೆ ನಮಗೆ ಇಲ್ಲ ಎಂದು ತಿಳಿಸಿದರು.
ಎಲ್ಲ ವಲಸಿಗರು ಪಕ್ಷವನ್ನು ಹೊಲಸು ಮಾಡಿಲ್ಲ. ವಲಸಿಗರಿಂದ ಪಕ್ಷ ಬಲವು ಆಗಿದೆ. ಕೆಲವರು ಮೂಲ ಬಿಜೆಪಿ ಎನ್ನುವವರು ಹೊಲಸು ಮಾಡಿದ್ದಾರೆ. ವಲಸಿಗರು ಕಾಣಿಕೆ ಹಾಗೂ ಹೊಲಸು ಮಾಡಿದ್ದಾರೆ. ಅವರನ್ನು ಹೇಗೆ ತೆಗೆದುಕೊಂಡು ಹೋಗುತ್ತೀವಿ ಎನ್ನುವುದು ಮುಖ್ಯ. ಪಕ್ಷದ ಕಾರ್ಯಕರ್ತರು ಆತಂಕ ಪಡುವುದು ಬೇಡ ಎಂದರು.ಗೆದ್ದವರಿಗೆ ಹಾಗೂ ಸೋತವರಿಗೆ ಯೋಗಕ್ಷೇಮ ಪಕ್ಷ ನೋಡಿಕೊಳ್ಳುತ್ತದೆ.ಗೆದ್ದವರು ಮಂತ್ರಿ ಆಗ್ತಾರೆ. ಜನನೇ ಬೇಡ ಅಂತ ಬಿಟ್ಟಮೇಲೆ ಎಲ್ಲರಿಗೂ ಅದೃಷ್ಟನೇ ಕೈಹಿಡಿಯುತ್ತೇ ಅಂತ ಹೇಳಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ೧೫ ಗೆದ್ದರೆ ೧೩ ಮಂದಿ ಮಂತ್ರಿ ಆಗ್ತಾರೆ ಎಂದು ತಿಳಿಸಿದರು.
ಹೈದರಾಬಾದ್‌ನಲ್ಲಿದ ಅತ್ಯಾಚಾರ ಪ್ರಕರಣದಿಂದದೇಶದ ಉದ್ದಗಲಕ್ಕೂ ಜನರ ಆಕ್ರೋಶವಿತ್ತು.ಹೈದರಾಬಾದ್ ಪೊಲೀಸರ ಕ್ರಮ ಒಂದು ಸಂದೇಶ ನೀಡಿದೆ. ಹೀಗೆ ಎಂಟತ್ತು ಕಡೆ ಎನ್‌ಕೌಂಟರೆ ಆದರೆ, ಭಯ ಆಗುತ್ತದೆ. ನೈತಿಕತೆಯ ಮೀತಿ ಮೀರಿದವರೆ ಭಯದಿಂದಲ್ಲೇ ನಿಗ್ರಿಸಬೇಬೇಕಿದೆ. ನಾಗರಿಕತೆ ಸಮಾಜದಲ್ಲಿ ನಾಗರಿಕರು ನಾಗರಿಕತೆ ಬದುಕುಬೇಕು ಎಂದರು. Conclusion:ಸಿ.ಟಿ.ರವಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.