ETV Bharat / state

ಟಿಕೆಟ್ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಬಸ್​​ ಕಂಡಕ್ಟರ್ ವಿರುದ್ಧ ಆರೋಪ - ಈಟಿವಿ ಭಾರತ ಕನ್ನಡ

ಯುವಕನೊಬ್ಬ ಹಣ ಕೊಟ್ಟು ಟಿಕೆಟ್​ ಕೇಳಿದ್ದಕ್ಕೆ ಕೆಎಸ್ಆರ್​​ಟಿಸಿ ಬಸ್ ನಿರ್ವಾಹಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.​

bus-conductor-assaulted-a-young-man-for-asking-for-a-ticket
ಟಿಕೆಟ್ ಕೇಳಿದಕ್ಕೆ ಯುವಕನ ಮೇಲೆ ಹಲ್ಲೆ: ಬಸ್​​ ಕಂಡಕ್ಟರ್ ವಿರುದ್ಧ ಆರೋಪ
author img

By

Published : Nov 19, 2022, 5:51 PM IST

ಮೈಸೂರು: ಹಣ ಕೊಟ್ಟು ಟಿಕೆಟ್ ಕೇಳಿದಕ್ಕೆ ಯುವಕನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಸರಗೂರು ಪಟ್ಟಣದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಟ್ನ ಗ್ರಾಮದ ಶಶಿಕುಮಾರ್ ಎಂಬುವವರ ಮೇಲೆ ಕಂಡಕ್ಟರ್ ಗೋಪಾಲ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಚ್.ಡಿ.ಕೋಟೆಯಿಂದ ಸರಗೂರಿಗೆ ಬರುವ ಕೆಎಸ್ಆರ್​​ಟಿಸಿ ಬಸ್ ಗೆ ಹ್ಯಾಂಡ್ ಪೋಸ್ಟ್ ಗ್ರಾಮದಿಂದ ಶಶಿಕುಮಾರ್ ಹತ್ತಿದ್ದರು. ಈ ವೇಳೆ, ಕಂಡಕ್ಟರ್ ಗೆ ಶಶಿಕುಮಾರ್ ಹಣವನ್ನು ಕೊಟ್ಟಿದ್ದಾರೆ. ಆದರೆ, ಕಂಡಕ್ಟರ್ ಟಿಕೆಟ್​​ ನೀಡಿಲ್ಲ,ಜೊತೆಗೆ ಬಾಕಿ ಹಣವನ್ನು ಕೊಟ್ಟಿಲ್ಲ. ಈ ಬಗ್ಗೆ ಕೇಳಿದಕ್ಕೆ ಸರಗೂರು ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಗೋಪಾಲ್ ಹಲ್ಲೆ ನಡೆಸಿರುವುದಾಗಿ ಶಶಿಕುಮಾರ್​ ಆರೋಪಿಸಿದ್ದಾನೆ.

ಕಂಡೆಕ್ಟರ್​ ಮಾತ್ರವಲ್ಲದೇ ಮೂವರು ಕೆಎಸ್ಆರ್​​ಟಿಸಿ ಸಿಬ್ಬಂದಿ ಥಳಿಸಿರುವುದಾಗಿ ಯುವಕ ಆರೋಪಿಸಿದ್ದಾನೆ. ಹಲ್ಲೆ ಮಾಡಿದ ಕಂಡಕ್ಟರ್ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಶಶಿಕುಮಾರ್ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.