ಮೈಸೂರು : ರಾಜ್ಯದಲ್ಲಿ ಬರವಿದ್ದರೂ ಜನ ಸೇವಕರು ದುಬಾರಿ ಹೋಟೆಲ್ಗಳಲ್ಲಿ ಕುಳಿತು ಮೋಜು ಮಸ್ತಿ ಮಾಡುವುದು ಸರಿಯಾದ ಸಂಪ್ರದಾಯವಲ್ಲ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದರು.
ನಂಜನಗೂಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಬಹಳ ದುರದೃಷ್ಟಕರ. ರಾಜ್ಯದಲ್ಲಿ ತನ್ನ ಸರ್ಕಾರವಿದ್ದಾಗ ಆಪರೇಷನ್ ಕಮಲ ಎಂಬ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಬಿಜೆಪಿ, ಮತ್ತೊಮ್ಮೆ ಶಾಸಕರಿಗೆ ಆಮಿಷವೊಡ್ಡಿ ಈ ಸಂಪ್ರದಾಯವನ್ನು ಮುಂದುವರೆಸುತ್ತಿರುವುದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ಸಾರುತ್ತಿದೆ.
ರಾಜ್ಯದಲ್ಲಿ ಬೀಕರ ಬರಗಾಲವಿದ್ದರೂ ಜನಪ್ರತಿನಿಧಿಗಳು ಮೋಜು, ಮಸ್ತಿ ಮಾಡುತ್ತ ಹೋಟೆಲ್ನಲ್ಲಿ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಇಂತಹ ಕೆಟ್ಟ ಸಂಪ್ರದಾಯ ರಾಜ್ಯಕ್ಕೆ ಒಳ್ಳೆಯದಲ್ಲ. ಸಮಸ್ಯೆಗಳಿದ್ದರೆ ನಾಯಕರ ಗಮನಕ್ಕೆ ತರಬೇಕು. ಆದ್ರೆ ಪ್ರಭಾವಿ ಮುಖಂಡರೇ ರಾಜೀನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.