ETV Bharat / state

ಶಾಲೆಗೆ ಹಿಜಾಬ್ ಹಾಕಿಯೇ ಹೋಗುವುದಾದ್ರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅವಕಾಶವಿಲ್ಲ: ಯತ್ನಾಳ್​ ಗುಡುಗು - ಹಿಜಾಬ್ ವಿವಾದ

ಕರ್ನಾಟಕವನ್ನ ತಾಲಿಬಾನ್ ಮಾಡಲು ಬಿಡುವುದಿಲ್ಲ. ಶಾಲೆಗಳಲ್ಲಿ ಹಿಜಾಬ್ ಬೆಂಬಲಿಸುವವರು ದೇಶ ದ್ರೋಹಿಗಳು.‌ ಶಾಲೆಗೆ ಹಿಜಾಬ್ ಹಾಕಿಕೊಂಡು ಹೋಗುವುದಾದರೆ ನೀವೆಲ್ಲ ಪಾಕಿಸ್ತಾನಕ್ಕೆ ಹೋಗಿ‌. ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್​ ಖಾರವಾಗಿ ಉತ್ತರಿಸಿದ್ದಾರೆ.

ಮೈಸೂರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

author img

By

Published : Feb 5, 2022, 2:12 PM IST

ಮೈಸೂರು: ಶಾಲೆಗೆ ಹಿಜಾಬ್ ಹಾಕಿಕೊಂಡು ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ‌. ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ. ಇವತ್ತು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿ ಮಸೀದಿ ಬೇಕು ಎನ್ನುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್​ ಪ್ರಶ್ನೆ ಮಾಡಿದ್ದಾರೆ.

ಮೈಸೂರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಇದು ಹಿಂದೂ ರಾಷ್ಟ್ರ. ಇಲ್ಲಿ ಗಣಪತಿ ಪೂಜೆ ಸೇರಿದಂತೆ ಹೆಣ್ಣುಮಕ್ಕಳು ಕುಂಕುಮ ಹಾಕಿಕೊಂಡು ಹೋಗುವುದಕ್ಕೆ ಅವಕಾಶವಿದೆ.‌ ಇದನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ, ಶಾಲೆಗಳಲ್ಲಿ ಹಿಜಾಬ್ ಬೆಂಬಲಿಸುವವರು ದೇಶ ದ್ರೋಹಿಗಳು.‌

ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ.‌ ಇಲ್ಲಿ ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ. ಕರ್ನಾಟಕವನ್ನ ತಾಲಿಬಾನ್ ಮಾಡಲು ಬಿಡುವುದಿಲ್ಲ. ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆ ಕೈವಾಡ ಇದೆ ಎಂದು ಯತ್ನಾಳ್ ಇದೇ ವೇಳೆ​ ಆರೋಪಿಸಿದರು.

ಮೈಸೂರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಜಾಬ್ ಬೆಂಬಲಿಸುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ನವರು ಹಿಂದೂನಾ?, ಅಥವಾ ಮುಸ್ಲಿಂಗೆ ಮತಾಂತರಗೊಂಡಿದ್ದಾರಾ?. ಪ್ರತಿ ಬಾರಿಯು ಮುಸ್ಲಿಂರನ್ನು ಓಲೈಸುವ ಗುಣ ಹೊಂದಿರುವ ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಮಾತನಾಡುವುದು ಮತಾಂತರವೇ ಎಂದು ಪ್ರಶ್ನೆ ಮಾಡಿದರು.

ಓದಿ: ಹಿಜಾಬ್ ಹೆಸರಿನಲ್ಲಿ ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ: ಕಟೀಲ್​ ಕಿಡಿ

ಈ ದೇಶದಲ್ಲಿ ಶೇ 15ರಷ್ಟಿ ಮುಸ್ಲಿಮರಿದ್ದಾರೆ. ಇವರ ಸಂಖ್ಯೆ 50 ಆದರೆ ಹಿಂದೂಗಳು ಉಳಿಯಲು ಸಾಧ್ಯವೆ?. ಇದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಇಬ್ಭಾಗವಾದಾಗ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಕೊಟ್ಟಿದ್ದಾರೆ. ನಿಮಗೆ ಈ ಸಂಸ್ಕೃತಿ ಬೇಡವೆಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಖಾರವಾಗಿ ಉತ್ತರಿಸಿದರು.

ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ: ನಾನು ಯಾವುದೇ ಸಚಿವ ಹಾಗೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ಸಿಎಂ ಮಾಡಿದರೆ ಸಮರ್ಥ ಹಾಗೂ ಸಾಧ್ಯವಾದಷ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ. ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.

ನಾನು ಮುಖ್ಯಮಂತ್ರಿಯಾದ್ರೆ ಮೇಕೆದಾಟಿನಿಂದ ಕೃಷ್ಣದ ವರೆಗೆ ಚಾಮರಾಜನಗರದಿಂದ ಬೀದರ್ ವರೆಗೆ ಕೆಲಸ ಮಾಡುತ್ತೇನೆ. ಹಿಂದೆ ಮೈಸೂರಿನವರಾದರೆ ಮೈಸೂರಿಗೆ, ಶಿವಮೊಗ್ಗದವರಾದರೆ ಶಿವಮೊಗ್ಗಕ್ಕೆ, ಹಾವೇರಿಯವರಾದರೆ ಹಾವೇರಿಗೆ ಕೆಲಸ ಮಾಡುವ ಸಿಎಂ ತರ ನಾನು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿಗೆ ಟಾಂಗ್ ನೀಡಿದರು.

ಓದಿ: ನಾ ಬಿಡಂಗಿಲ್ಲ, ನೀ ಕೇಳಂಗಿಲ್ಲ: ಮರದ ಬಳ್ಳಿ ನಡುವೆ ಸುತ್ತಿಕೊಂಡು ಕಪ್ಪೆ ತಿಂದು ಹಾಕಿದ ಬಿಲ್ ಮುರಿ ಹಾವು

ನಾನು ಶಾಂತವಾಗಿದ್ದೇನೆ, ಹಾಗೆಂದ ಮಾತ್ರಕ್ಕೆ ಸುಮ್ಮನಿಲ್ಲ. ಮುಂದೆ ಮಹಾ ಸ್ಫೋಟ ಖಚಿತ ಎಂದು ಮುಂದಿನ ರಾಜಕೀಯ ಸ್ಫೋಟದ ಬಗ್ಗೆ ಸುಳಿವು ನೀಡಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸೋಮವಾರ ಅಥವಾ ಮಂಗಳವಾರ ಸ್ಪಷ್ಟತೆ ಸಿಗಲಿದೆ.‌ ಇನ್ನೂ ಒಂದು ವರ್ಷ ಅವಕಾಶ ಇದೆ.

ಮಂತ್ರಿ ಮಾಡುವುದಾದರೆ ಸದ್ಯಕ್ಕೆ ಪ್ರಾಂತ್ಯವಾರು ಆದ್ಯತೆ ನೀಡಿ ಅಸಮಾನತೆ ಸರಿಪಡಿಸಿ. ಇಲ್ಲ ಅಂದ್ರೆ 6 ತಿಂಗಳು ಇರುವಾಗ ಮಂತ್ರಿ ಮಾಡಿದ್ರೆ ಯಾವುದೇ ಪ್ರಯೋಜನವಿಲ್ಲ. ಈಗಿರುವ ಮಂತ್ರಿಗಳೇ ಮಂತ್ರಿಗಳಾಗಿರಲಿ, ನಾವು ಶಾಸಕರಾಗಿದ್ದು ಖುಷಿಯಾಗಿರುತ್ತೇವೆ. ಇದರಲ್ಲಿ ಅಸಮಾಧಾನ ಇಲ್ಲ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.