ETV Bharat / state

94 ಕೆಜಿ ಗುಂಡು ಕಲ್ಲನ್ನು 20 ಬಾರಿ ಎತ್ತಿ ಬಿಸಾಡಿದ ಭೂಪ... ಇಲ್ಲಿದೆ ನೋಡಿ ಪೈಲ್ವಾನ್​ ತಾಕತ್ತು ​

ಬಲ ಪ್ರದರ್ಶನದ ಮೇಲೆ ನಡೆಯುವ ಗುಂಡು ಕಲ್ಲು ಎತ್ತುವ ಸ್ಪರ್ಧೆ ದಸರಾ ಕ್ರೀಡಾಕೂಟದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎರಡು ನಿಮಿಷದಲ್ಲಿ 94ಕೆ.ಜಿ ಭಾರದ ಗುಂಡು ಕಲ್ಲನ್ನು 20 ಬಾರಿ ಪಟಪಟನೆ ಎತ್ತಿ‌ ಬಿಸಾಡುವ ಮೂಲಕ ನಾಗನಹಳ್ಳಿಯ ಪೈಲ್ವಾನ್​ ಅವಿನಾಶ್ ಪ್ರಥಮ ಸ್ಥಾನ ಪಡೆದರು.

ಮೈಸೂರಿನಲ್ಲಿ ಕಲ್ಲು ಗುಂಡು ಎತ್ತುವ ಸ್ಪರ್ಧೆ : ಬಲ ಪ್ರದರ್ಶನ ಮಾಡಿದ ರೈತರು
author img

By

Published : Oct 3, 2019, 8:32 AM IST

Updated : Oct 3, 2019, 10:24 AM IST

ಮೈಸೂರು: ದಸರಾ ಕ್ರೀಡಾಕೂಟದಲ್ಲೇ ಅತಿಹೆಚ್ಚು ಬಲ ಪ್ರದರ್ಶನದ ಮೇಲೆ ನಡೆಯುವ ಗುಂಡು ಕಲ್ಲು ಎತ್ತುವ ಸ್ಪರ್ಧೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎರಡು ನಿಮಿಷದಲ್ಲಿ 94ಕೆ.ಜಿ. ಭಾರದ ಗುಂಡು ಕಲ್ಲನ್ನು 20 ಬಾರಿ ಪಟ ಪಟನೆ ಎತ್ತಿ‌ ಬಿಸಾಡುವ ಮೂಲಕ ನಾಗನಹಳ್ಳಿಯ ಪೈಲ್ವಾನ್​ ಅವಿನಾಶ್ ಪ್ರಥಮ ಬಹುಮಾನಕ್ಕೆ ಪಾತ್ರರಾದರು.

ರೈತರು ಬಹುತೂಕದ ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ನಾಗನಹಳ್ಳಿಯ ಪೈಲ್ವಾನ್ ಅವಿನಾಶ್ 2015ರಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ನಂತರ 2016 ಹಾಗೂ 2017ರಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಈ ಬಾರಿ 2 ನಿಮಿಷದಲ್ಲಿ 20 ಬಾರಿ 94 ಕೆ.ಜಿ. ತೂಕದ ಗುಂಡು ಕಲ್ಲು ಎತ್ತುವ ಮೂಲಕ ಮತ್ತೊಮ್ಮೆ ತಮ್ಮ ತಾಕತ್ತು ಪ್ರದರ್ಶಿಸಿದರು.

ಮೈಸೂರಿನಲ್ಲಿ ಕಲ್ಲು ಗುಂಡು ಎತ್ತುವ ಸ್ಪರ್ಧೆ : ಬಲ ಪ್ರದರ್ಶನ ಮಾಡಿದ ರೈತರು

ಎರಡು ನಿಮಿಷಕ್ಕೆ 15 ಬಾರಿ 94 ಕೆ.ಜಿ. ತೂಕದ ಗುಂಡು ಕಲ್ಲು ಎತ್ತಿದ ಹಂಚ್ಯಾ ಗ್ರಾಮದ ಜಯಕುಮಾರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಸತತವಾಗಿ 2016, 2017 ಹಾಗೂ 2018ನೇ ಸಾಲಿನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದರು. ಇನ್ನು, ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ರವಿ ಹಾಗೂ ಮೈಸೂರು ತಾಲೂಕಿನ ಜಯಕುಮಾರ್ ಇಬ್ಬರೂ ಎರಡು ನಿಮಿಷದ ಅವಧಿಯಲ್ಲಿ ಸಮಬಲದ ಸಾಮರ್ಥ್ಯ ತೋರುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡರು.

Intro:ಗುಂಡುBody:ಮೈಸೂರು:ಎರಡು ನಿಮಿಷದಲ್ಲಿ ೯೪ ಕೆ.ಜಿ. ಭಾರದ ಕಲ್ಲು ಗುಂಡನ್ನು ೨೦ ಬಾರಿ ಪಟಾಪಟನೆ ಎತ್ತಿ‌ ಬಿಸಾಡಿದ ಮೂಲಕ ನಾಗನಹಳ್ಳಿಯ ಪೈ.ಅವಿನಾಶ್ ಪ್ರಶಸ್ತಿಯ ಹ್ಯಾಟ್ರಿಕ್ ಬಾರಿಸಿದರು.
ರೈತ ದಸರಾ ಕ್ರೀಡಾಕೂಟದಲ್ಲೇ ಅತಿಹೆಚ್ಚು ಬಲ ಪ್ರದರ್ಶನದ ಮೇಲೆ ನಡೆಯುವ ಕಲ್ಲು ಗುಂಡು ಎತ್ತುವ ಆಟ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು. ರೈತರು ಬಹುತೂಕದ ಗುಂಡು ಎತ್ತುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.
ಹಿಂದೆ ಕಲ್ಲು ಗುಂಡು ಎತ್ತುವುದರಲ್ಲಿ ಹೆಸರುವಾಗಿಯಾಗಿದ್ದ ನಾಗನಹಳ್ಳಿಯ ಪೈಲ್ವಾನ್ ತಮ್ಮೇಗೌಡರಿಂದ ಪ್ರೇರಣೆಗೊಂಡ ಅದೇ ಗ್ರಾಮದ ಅವಿನಾಶ್ ೨೦೧೫ರಲ್ಲಿ ಪ್ರಥಮವಾಗಿ ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಅನಂತರ ೨೦೧೬ ಹಾಗೂ ೨೦೧೭ರಲ್ಲಿ ಕ್ರಮವಾಗಿ ಪ್ರಥಮ ಸ್ಥಾನಗಳಿಸಿದ್ದರು. ಈ ಬಾರಿ ೨ ನಿಮಿಷದಲ್ಲಿ ೨೦ ಬಾರಿ ೯೪ ಕೆ.ಜಿ ತೂಕದ ಗುಂಡು ಕಲ್ಲು ಎತ್ತುವ ಮೂಲಕ ಮೂರನೇ ಬಾರಿಗೆ ವಿಜೇತರಾಗಿ ಬೀಗಿದರು.
ಹ್ಯಾಟ್ರಿಕ್‌ನಲ್ಲಿ ‘ಜಯ’ ಕುಮಾರ: ಎರಡು ನಿಮಿಷಕ್ಕೆ ಹದಿನೈದು ಬಾರಿ ೯೪ ಕೆ.ಜಿ ತೂಕದ ಕಲ್ಲು ಗುಂಡು ಎತ್ತಿದ ತಾಲ್ಲೂಕಿನ ಹಂಚ್ಯಾ ಗ್ರಾಮದ ಜಯಕುಮಾರ ದ್ವಿತೀಯ ಸ್ಥಾನದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಸತತವಾಗಿ ೨೦೧೬ ಹಾಗೂ ೨೦೧೭ ಹಾಗೂ ೨೦೧೮ನೇ ಸಾಲಿನ ದಸರೆಯ ಗುಂಡು ಎತ್ತುವ ಸ್ಪರ್ಧೇಯಲ್ಲಿ ಜಿಲ್ಲಾಮಟ್ಟದಲ್ಲೇ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾರೆ.
ಅದೇ ರೀತಿಯಾಗಿ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯ ರವಿ ಹಾಗೂ ಮೈಸೂರು ತಾಲ್ಲೂಕಿನ ಜಯಕುಮಾರ್ ಇಬ್ಬರೂ ಎರಡು ನಿಮಿಷಕ್ಕೆ ೧೫ ಬಾರಿ ಗುಂಡು ಎತ್ತುವ ಮೂಲಕ ಸಮಬಲದ ಸಾಮರ್ಥ್ಯ ತೋರಿ ದ್ವಿತೀಯ ಸ್ಥಾನ ಹಂಚಿಕೊಂಡರು. ರವಿ ಅವರು ಈ ಹಿಂದೆ ಸ್ಪರ್ಧಿಸಿದ್ದಾಗ ಮೋಸಕ್ಕೆ ಒಳಗಾಗಿ ದಸರಾ ಸ್ಪರ್ಧೆಯಿಂದ ದೂರ ಉಳಿದಿದ್ದರು. ಇದೀಗ ಮತ್ತೊಮ್ಮೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದರು.Conclusion:ಗುಂಡು
Last Updated : Oct 3, 2019, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.