ಮೈಸೂರು: ಸೋಮನಾಥಪುರ ಗ್ರಾಮದ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರದ ಕಾಮಗಾರಿ ನಡೆಯುತ್ತಿರುವ ವೇಳೆ ಪುರಾತನ ವಿಗ್ರಹ ಪತ್ತೆಯಾಗಿದೆ.
![ಪತ್ತೆಯಾದ ಪುರಾತನ ವಿಗ್ರಹ](https://etvbharatimages.akamaized.net/etvbharat/prod-images/kn-mys-9-temple-statue-detect-news-7208092_27072020194208_2707f_1595859128_64.jpg)
ತಿ.ನರಸೀಪುರ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿರುವ ಪುರಾತನ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರದ ಕಾಮಗಾರಿ ನಡೆಯುತ್ತಿರುವ ವೇಳೆ ದೇವಸ್ಥಾನದ ಪಕ್ಕ ಅಡಿಪಾಯವನ್ನು ತೆಗೆಯುತ್ತಿದ್ದಾಗ ಸುಮಾರು 1.50 ಅಡಿ ಎತ್ತರದ ಕಾಲಬೈರವೇಶ್ವರನ ರೂಪದಲ್ಲಿರುವ ಅಮೃತ ಶಿಲೆಯಂತಿರುವ ಪುರಾತನ ವಿಗ್ರಹ ದೊರೆತಿದೆ.
![ಸ್ಥಳಕ್ಕೆ ತಿ.ನರಸೀಪುರ ಪೋಲಿಸರ ಭೇಟಿ](https://etvbharatimages.akamaized.net/etvbharat/prod-images/kn-mys-9-temple-statue-detect-news-7208092_27072020194208_2707f_1595859128_391.jpg)
ಸ್ಥಳಕ್ಕೆ ತಿ.ನರಸೀಪುರ ಪೊಲೀಸರು ಹಾಗೂ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆಗಮಿಸಿ, ಈ ಪುರಾತನ ವಿಗ್ರಹವನ್ನು ತಾಲೂಕಿನ ಮುಜರಾಯಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.