ಮೈಸೂರು: ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಬಂಧನ ಆಗಿಲ್ಲ, ಆತನ ಬಂಧನಕ್ಕೆ ಪೋಲಿಸರು ಸಾಕಷ್ಟು ಶ್ರಮ ವಹಿಸುತ್ತಿದ್ದರೆ ಎಂದು ಎ ಡಿ ಜಿ ಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದರು. ಇಂದು ಎರಡನೇ ಬಾರಿಗೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಕಾನೂನು ಸುವ್ಯವಸ್ಥೆ ಎ ಡಿ ಜಿ ಪಿ ಅಲೋಕ್ ಕುಮಾರ್ ಅಧಿಕಾರಿಗಳ ಜೊತೆ ಸ್ಯಾಂಟ್ರೊ ರವಿ ಬಂಧನದ ಬಗ್ಗೆ ಆಗಿರುವ ಪ್ರಗತಿ ಬಗ್ಗೆ ಸಭೆಯನ್ನು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಸುತ್ತಿದ್ದಾರೆ.
ಕಳೆದ ವಾರ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ವಿರುದ್ಧ ಸಂತ್ರಸ್ತೆ ಅತ್ಯಾಚಾರ ಮತ್ತು ಅಟ್ರಾಸಿಟಿ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಟ್ರೊ ರವಿ ಬಂಧನಕ್ಕೆ ಜ.10ರಂದು ಮೈಸೂರಿನ ನಾಲ್ಕು ಪೊಲೀಸ್ ತಂಡಗಳು ಬಲೆ ಬಿಸಿದ್ದು, ಆತನ ಬಂಧನ ಇದುವರೆಗೂ ಆಗಿಲ್ಲ. ಜ.10 ರಂದು ಮಂಗಳವಾರ ಮೈಸೂರು ನಗರ ಪೊಲೀಸ್ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ಎ ಡಿ ಜಿ ಪಿ. ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸ್ಯಾಂಟ್ರೊ ರವಿಯನ್ನು ಶೀಘ್ರವಾಗಿ ಬಂಧಿಸುತ್ತೇವೆ ಹಾಗೂ ಆತನ ಬಂಧನಕ್ಕೆ ಯಾವುದು ಪ್ರಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ಬಾರಿಗೆ ಎಡಿಜಿಪಿ ಸಭೆ : ದೂರು ದಾಖಲಾಗಿ 10 ದಿನಗಳು ಕಳೆಯುತ್ತಿದ್ದರು ಸ್ಯಾಂಟ್ರೋ ರವಿ ಬಂಧನ ಆಗಿಲ್ಲ, ಈ ಬಗ್ಗೆ ಎರಡನೇ ಬಾರಿಗೆ ಮೈಸೂರು ನಗರ ಪೊಲೀಸ್ ಕಚೇರಿಯಲ್ಲಿ ಎಡಿಜಿಪಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರು. ಅಲೋಕ್ ಕುಮಾರ್ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, ಸ್ಯಾಂಟ್ರೊ ರವಿ ಬಂಧನ ಇದುವರೆಗೂ ಆಗಿಲ್ಲ, ವಿಶೇಷ ತಂಡಗಳು ಸಾಕಷ್ಟು ಎಫಾರ್ಟ್ ಹಾಕಿ ಕೆಲಸ ಮಾಡುತ್ತಿವೆ. ಬೇರೆ ಬೇರೆ ಜಿಲ್ಲೆಗಳಿಂದ ಎಸ್ಪಿಗಳು ತನಿಖೆಗೆ ಬಂದಿದ್ದಾರೆ. ಆತನ ಮೇಲೆ ಸಾಕಷ್ಟು ಕೇಸ್ಗಳು ಇವೆ, ಇದು ಅವನ ಮೊದಲ ಕೇಸ್ ಅಲ್ಲ. ಪೊಲೀಸ್ ಇಲಾಖೆಯ ಕೆಲವರ ಜೊತೆ ಸ್ಯಾಂಟ್ರೊ ರವಿ ಸಂಪರ್ಕ ಇದೆ, ಈ ಬಗ್ಗೆಯೂ ಸಹ ತನಿಖೆ ನಡೆಯುತ್ತಿದೆ. ಆತ ಸಿಗುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ: ಅಲೋಕ್ ಕುಮಾರ್ ಈ ಸಭೆಯಲ್ಲಿ ರಾಮನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೈಸೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅಲೋಕ್ ಕುಮಾರ್ ಸಭೆ ನಡೆಸಿದರು.
ಸ್ಯಾಂಟ್ರೊ ರವಿ ಬಂಧನಕ್ಕೆ ಪೊಲೀಸ್ ಬಲೆ: ವಿಶೇಷ ಪೊಲೀಸ್ ತಂಡಗಳು ಕಳೆದ ಮೂರು ದಿನಗಳಿಂದ ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಿಗೂ ಪೊಲೀಸ್ ತಂಡ ತೆರಳಿವೆ. ಆದರೆ, ಸ್ಯಾಂಟ್ರೊ ರವಿ ತನ್ನ ಎಲ್ಲಾ ಮೊಬೈಲ್ಗಳನ್ನ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು, ಪೊಲೀಸರಿಗೆ ಆತನ ಹುಡುಕಾಟಕ್ಕೆ ಕಷ್ಟವಾಗಿದೆ. ಈ ನಡುವೆ ಕಳೆದ ವಾರ ಮೈಸೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮಿನಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯ ಅರ್ಜಿಯನ್ನು ಜನವರಿ 17 ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತನೇ ಎಂಬುದನ್ನು ಪರಿಶೀಲಿಸಲು ಸೂಚಿಸಿದ್ದೇನೆ: ಸಿಎಂ ಬೊಮ್ಮಾಯಿ