ETV Bharat / state

ಪೊಲೀಸ್​ ಠಾಣೆಗೆ ಬಂದ ನಟಿ ಪವಿತ್ರಾ ಲೋಕೇಶ್.. ಕಾರಣ? - ವಿವಿ ಪುರಂ ಪೋಲಿಸ್ ಠಾಣೆಯಲ್ಲಿ ನಟಿ ಪವಿತ್ರಾ ಲೋಕೇಶ್ ದೂರು

ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಮತ್ತು ಫೇಸ್​ಬುಕ್​ನಲ್ಲಿ ಮಾನಹಾನಿ ಫೋಟೋಗಳನ್ನು ಹಾಕಲಾಗುತ್ತದೆ ಎಂದು ದೂರು ನೀಡಿದ್ದ ನಟಿ ಪವಿತ್ರಾ ಈಗ ಮತ್ತೊಂದು ದೂರು ದಾಖಲಿಸಿದ್ದಾರೆ.

actress-pavithra-lokesh-lodged- Another-complaint-in-mysuru
ಮೈಸೂರಿನಲ್ಲಿ ಪೊಲೀಸರಿಗೆ ಮತ್ತೊಂದು ದೂರು ನೀಡಿದ ನಟಿ ಪವಿತ್ರಾ ಲೋಕೇಶ್
author img

By

Published : Jul 2, 2022, 11:05 PM IST

ಮೈಸೂರು: ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ನಟಿ ಪವಿತ್ರಾ ಲೋಕೇಶ್ ಆಗಮಿಸಿ ದೂರು ನೀಡಿದ್ದಾರೆ. ತಮ್ಮನ್ನು ಯಾರೋ ಹಿಂಬಾಲಿಸುವ ಕುರಿತಾಗಿ ಈ ದೂರು ಕೊಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ನಟಿ ಪವಿತ್ರಾ ಲೋಕೇಶ್ ಇಂದು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಅವರನ್ನ ಕೆಲವರು ಹಿಂಬಾಲಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮೈಸೂರಿಗೆ ಆಗಮಿಸಿದ ತಕ್ಷಣವೇ ಅವರು ನಗರದ ವಿವಿ ಪುರಂ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅವರು ಹೊರಟು ಹೋದರು.

ಜೂನ್​ 19ರಂದು ತಮ್ಮ ಹೆಸರಿನಲ್ಲಿ ನಕಲಿ ಫೇಸ್​​ಬುಕ್​ ಖಾತೆ ತೆರೆದು ಸುಳ್ಳು ಸುದ್ದಿಗಳು ಹಾಗೂ ಮಾನಹಾನಿ ಅಂತಹ ಫೋಟೋಗಳನ್ನ ಹಾಕಲಾಗುತ್ತಿದೆ. ಅಲ್ಲದೇ, ಅಶ್ಲೀಲ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ. ಆದ್ದರಿಂದ ಈ ರೀತಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಸೈಬರ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಮೈಸೂರಿನ ಸೈಬರ್ ಠಾಣೆಗೆ ದೂರು ನೀಡಿದ ನಟಿ ಪವಿತ್ರ ಲೋಕೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.