ಮೈಸೂರು: ನಿವೇಶನದ ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಪಿಡಿಓ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮಹದೇವನಾಯಕ ಎಂಬ ಪಿಡಿಓ ಲಂಚ ಪಡೆಯುವಾಗ ಎಸಿಬಿ ಬೆಲೆಗೆ ಬಿದ್ದಿದ್ದಾರೆ. ನಗರದ ಶ್ರೀರಾಂಪುರ ನಿವಾಸಿಯಾದ ವಿಜಯಸಿಂಹ ಅವರು ತಮ್ಮ ಪತ್ನಿ ದೀಪಾಸಿಂಹ ಹೆಸರಿನಲ್ಲಿ ಸಿಂಧುವಳ್ಳಿಯ ರಾಜರಾಜೇಶ್ವರಿ ಎನ್ಕ್ಲೇವ್ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದರು. ಇದರ ಖಾತೆಯನ್ನು ಬದಲಾವಣೆ ಮಾಡಿಕೊಡುವಂತೆ ಸಿಂಧುವಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಖಾತೆ ಬದಲಾವಣೆಗೆ ಪಿಡಿಓ ಮಹದೇವನಾಯಕ ಅವರು 5,000 ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ವಿಜಯಸಿಂಹ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಇಂದು ಪಿಡಿಓ ಅಧಿಕಾರಿ ಲಂಚ ಸ್ವೀಕಾರಿಸುತ್ತಿದ್ದ ವೇಳೆ ಎಸಿಬಿ ಪೋಲಿಸರು ಬಂಧಿಸಿದ್ದಾರೆ.