ETV Bharat / state

ಅಭಿರಾಮ್ ಜಿ. ಶಂಕರ್ ಕಾರ್ಯವೈಖರಿ ಪ್ರಶಂಸನೀಯ: ಸಚಿವ ಸೋಮಶೇಖರ್​

ಪ್ರಾಮಾಣಿಕ ನಿರ್ಗಮಿತ ಡಿಸಿ ಅಭಿರಾಮ್ ಜಿ. ಶಂಕರ್ ಜೊತೆ ಕೆಲಸ ಮಾಡಿರುವುದು ನನ್ನ ಅದೃಷ್ಟ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

dsds
ಸಚಿವ ಎಸ್.ಟಿ.ಸೋಮಶೇಖರ್​ ಹೇಳಿಕೆ
author img

By

Published : Sep 12, 2020, 11:04 AM IST

ಮೈಸೂರು: ಸಾರ್ವಜನಿಕರಿಗೆ ಸ್ವಂದಿಸಿ, ಅಭಿವೃದ್ಧಿ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಕಾರ್ಯವೈಖರಿ ಪ್ರಶಂಸನೀಯ ಎಂದು ನಿರ್ಗಮಿತ ಡಿಸಿ ಅಭಿರಾಮ್ ಜಿ. ಶಂಕರ್ ಅವರ ಗುಣಗಾನ ಮಾಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್​.

ಸಚಿವ ಎಸ್.ಟಿ.ಸೋಮಶೇಖರ್

ಜಿಲ್ಲಾಧಿಕಾರಿಯಾಗಿ ಎರಡು ವರ್ಷ ನಾಲ್ಕು ತಿಂಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅಭಿರಾಮ್ ಜಿ. ಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಅನಿರೀಕ್ಷಿತವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದಾಗ ನಮ್ಮ ಸ್ನೇಹಿತರು ಜಿಲ್ಲಾಧಿಕಾರಿ ಸಮರ್ಥವಾಗಿದ್ದಾರೆ. ನೀವು ನಿಶ್ಚಿಂತೆಯಿಂದ ಇರಬಹದು ಎಂದಿದ್ದರು. ಅದು ಅಭಿರಾಮ್ ಅವರ ಒಟನಾಟದಲ್ಲಿ ಸಾಬೀತಾಯಿತು.

ಅಭಿರಾಮ್ ಅವರು ಜಿಲ್ಲಾಧಿಕಾರಿಯಾಗಿ ಎಂದೂ ಯಾರ ಮೇಲೂ ದರ್ಪ ಮೆರೆಯಲಿಲ್ಲ. ಅವರು ಸಾರ್ಜನಿಕರಿಗೆ ಸ್ವಂದಿಸಿ, ಗೌರವಿಸಬೇಕು ಎಂಬ ಮನೋಭಾವ ಇಟ್ಟುಕೊಂಡಿರುವವರು. ಅದರಂತೆ ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸಿ, ಜನತೆ ಮೆಚ್ಚುವಂತೆ ಕೆಲಸ ಮಾಡಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಅಭಿರಾಮ್​, ತಮಗೆ ಕರ್ತವ್ಯ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.