ಮೈಸೂರು: ಅನುಮಾನಾಸ್ಪದವಾಗಿ ಯುವಕನೋರ್ವ ಮೃತಪಟ್ಟ ಘಟನೆ ವರುಣ ವ್ಯಾಪ್ತಿಯ ಮರಸೆ ಗ್ರಾಮದಲ್ಲಿ ನಡೆದಿದೆ.
ಯುವಕ ಕಿರಣ್ ಕುಮಾರ್ (18) ಎಂಬಾತನೇ ಮೃತಪಟ್ಟ ಯುವಕ. ಈತ ಮರಸೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಕೊಲೆಯಾಗಿರುವುದಾಗಿ ಮೃತನ ತಾಯಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.